Close Menu
News-Desk-KannadaNews-Desk-Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*
  • *ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*
  • *ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*
  • *ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*
  • *ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*
  • *‘ಜಂತು ಹುಳು ರಹಿತ ಮಕ್ಕಳು – ಆರೋಗ್ಯವಂತ ಮಕ್ಕಳು’ ರಾಷ್ಟ್ರೀಯ ಜಂತು ಹುಳು ನಿವಾರಣಾ ಕಾರ್ಯಕ್ರಮ*
  • *ಫೆ.14 ರಂದು ಕೊಡವ ಭವನ ಉದ್ಘಾಟನೆ*
  • *ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*
  • *ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*
  • *104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*
News-Desk-KannadaNews-Desk-Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News-Desk-KannadaNews-Desk-Kannada





Home » *ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಸಾಧಕರಿಗೆ ಸನ್ಮಾನ – ಪ್ರತಿಭಾ ಪುರಸ್ಕಾರ ವಿತರಣೆ : ಧಮ೯ ಸಂಸ್ಕಾರ ಕಲಿಸಲು ಬ್ರಾಹ್ಮಣ ಸಮಾಜ ಮುಂದಾಗಬೇಕು : ಅನಿಲ್ ಹೆಚ್.ಟಿ ಸಲಹೆ*
ಇತ್ತೀಚಿನ ಸುದ್ದಿಗಳು

*ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಸಾಧಕರಿಗೆ ಸನ್ಮಾನ – ಪ್ರತಿಭಾ ಪುರಸ್ಕಾರ ವಿತರಣೆ : ಧಮ೯ ಸಂಸ್ಕಾರ ಕಲಿಸಲು ಬ್ರಾಹ್ಮಣ ಸಮಾಜ ಮುಂದಾಗಬೇಕು : ಅನಿಲ್ ಹೆಚ್.ಟಿ ಸಲಹೆ*

January 26, 20263 Mins Read
Share
Facebook Twitter LinkedIn Pinterest WhatsApp Email

ಮಡಿಕೇರಿ ಜ.26 NEWS DESK : ಈಗಿನ ತಲೆಮಾರಿನ ಜೆನ್ ಜಿ ಪೀಳಿಗೆಗೆ ತಕ್ಕಂತೆ ಡಿಜಿಟಲ್ ಮಾಧ್ಯಮದಲ್ಲಿಯೇ ಧಮ೯ ಮತ್ತು ಜೀವನ ಸಂಸ್ಕಾರವನ್ನು ಕಲಿಸುವ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜ ಕಾಯ೯ಯೋಜನೆ ರೂಪಿಸಬೇಕೆಂದು ಹಿರಿಯ ಪತ್ರಕತ೯ ಅನಿಲ್ ಹೆಚ್.ಟಿ. ಸಲಹೆ ನೀಡಿದ್ದಾರೆ. ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಆಯೋಜಿತ ಬ್ರಾಹ್ಣಣ ವಿದ್ಯಾಭಿವೃದ್ಧಿ ನಿಧಿಯ ವಾಷಿ೯ಕ ಪ್ರತಿಭಾ ಪುರಸ್ಕಾರ ವಿತರಣೆ, ಸಾಧಕರಿಗೆ ಸನ್ಮಾನ ಕಾಯ೯ಕ್ರಮ ಉದ್ಘಾಟಿಸಿ ಮಾತನಾಡಿದ ಅನಿಲ್, ಡಿಜಿಟಲ್ ಯುಗದಲ್ಲಿ ಜನಿಸಿದ ಜೆನ್ ಜಿ ಮತ್ತು ಆಲ್ಫಾ ಪೀಳಿಗೆಯು ಮೊಬೈಲ್, ಇಂಟರ್ ನೆಟ್ ಹೊರತಾಗಿ ಜೀವನವನ್ನೇ ಯೋಚಿಸುತ್ತಿಲ್ಲ. ಹಳೇ ತಲೆಮಾರಿನ ಸಂಸ್ಕೖತಿ, ಸಂಪ್ರದಾಯ, ಲೇಖಕರು, ಸಾಹಿತ್ಯದ ಪರಿಚಯವೂ ಈ ಪೀಳಿಗೆಗೆ ಇಲ್ಲ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಮಾಜವು ವಾರಕ್ಕೊಂದು ದಿನವಾದರೂ ನವಪೀಳಿಗೆಯೂ ಸೇರಿದಂತೆ ವಿದ್ಯಾಥಿ೯ಗಳಿಗೆ ಧಮ೯ ಶಿಕ್ಷಣದಂಥ ಕಾಯ೯ಕ್ರಮ ರೂಪಿಸಬೇಕೆಂದು ಕರೆ ನೀಡಿದರು.  ಆಧುನಿಕ ದಿನಗಳಲ್ಲಿ ಕೌಟುಂಬಿಕ ಸಂಬಂದಗಳು ಮೌಲ್ಯ ಕಳೆದುಕೊಳ್ಳುತ್ತಿದೆ ಎಂದು ವಿಷಾಧಿಸಿದ ಅನಿಲ್, ಬ್ರಿಟನ್ ಲೇಖಕ ಸ್ಟೀಫನ್ ಫ್ರೈ ಹೇಳಿದಂತೆ ಒಂದೇ ಮನೆಯಲ್ಲಿ ಐದಾರು ದೇಶಗಳ ಸಂಸ್ಕೃತಿ ಕಂಡುಬರುತ್ತಿದೆ. ಅಪ್ಪ ಅಮೇರಿಕಾದ ರಾಜಕೀಯ ಗಮನಿಸುತ್ತಿದ್ದರೆ, ಅಮ್ಮ ನ್ಯೂಜಿಲೆಂಡ್ ನಲ್ಲಿರುವ ಮಗಳೊಂದಿಗೆ ಮಾತನಾಡುತ್ತಾಳೆ. ಮಗ ರಾಕ್ ಸಂಗೀತ ಕೇಳುತ್ತಿದ್ದರೆ ಅಜ್ಜಿ ಭಾರತೀಯ ದೇವರ ಧ್ಯಾನದಲ್ಲಿ ನಿರತಳಾಗಿರುತ್ತಾಳೆ. ಮಗಳು ಚೈನೀಸ್ ತಿಂಡಿ ಆಸ್ವಾದಿಸುತ್ತಿರುತ್ತಾಳೆ. ಹೀಗೆ ಮನೆಯೊಂದರಲ್ಲಿ ವಿವಿಧ ದೇಶಗಳ ಸಂಸ್ಕೃತಿ ಹಾಸುಹೊಕ್ಕಾಗುವಂಥ ದಿನಗಳು ಈಗಿನವು ಎಂದರು. ಪ್ರತಿಯೋವ೯ರನ್ನೂ ಬೆಸೆಯುವದಕ್ಕಾಗಿ ನೂರಾರು ಉಪಕರಣಗಳಿದ್ದರೂ ಎಲ್ಲರೂ ಒಂಟಿತನ ಅನುಭವಿಸುತ್ತಿರುವುದು ಆಧುನಿಕಕಾಲದ ಡಿಜಿಟಲ್ ಯುಗದ ವಿಪಯಾ೯ಸ ಎಂದು ವಿಶ್ಲೇಷಿಸಿದ ಅನಿಲ್, ಮನಗೆದ್ದು ಮಾರು ಗೆಲ್ಲು ಎಂಬಂತೆ ಬ್ರಾಹ್ಮಣ ಸಮಾಜದವರು ಇತರೆಲ್ಲಾ ಸಮಾಜದವರಿಗೆ ಮಾದರಿಯಾಗುವಂತೆ ಆದಶ೯ಯುತ ಜೀವನ ನಡೆಸಬೇಕೆಂದು ಕರೆ ನೀಡಿದರು. ಆಧುನಿಕತೆಯ ಭರಾಟೆಯಲ್ಲಿ ಕೂಡುಕುಟುಂಬಗಳು, ಕೌಟುಂಬಿಕ ಸಂಬಂಧಗಳು ದೂರವಾಗದಂತೆ ಗಮನ ಹರಿಸಿ ಎಂದೂ ಅವರು ಕಿವಿಮಾತು ಹೇಳಿದರು. ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ನಿಧಿಯ ಸಭಾಂಗಣದ ಮೇಲಂತಸ್ತಿನ ಕಾಮಗಾರಿಯನ್ನು ಸಮುದಾಯಬಾಂಧವರ ಸಹಕಾರದೊಂದಿಗೆ ಈ ವಷ೯ವೇ ಕೈಗೊಳ್ಳಲಾಗುತ್ತದೆ. ಬ್ರಾಹ್ಮಣ ಸಮುದಾಯದವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ವಷ೯ಂಪ್ರತಿಯಿಂತೆಯೇ ಈ ಬಾರಿಯೂ ಕ್ರೀಡಾ ಸ್ಪಧೆ೯, ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿತ್ತು ಎಂದರು. ಕೊಡಗು ಜಿಲ್ಲೆಯಾದ್ಯಂತ ಬ್ರಾಹ್ಮಣ ಸಮುದಾಯದವರ ಸಂಘಟನೆಗೆ ಮುಂದಿನ ದಿನಗಳಲ್ಲಿ ಕಾಯ೯ಯೋಜನೆ ಹಮ್ಮಿಕೊಳ್ಳಲಾಗುತ್ತದೆ ಎಂದೂ ರಾಮಚಂದ್ರ ಮೂಗೂರು ತಿಳಿಸಿದರು. ಕ್ರೀಡಾ ಸ್ಪಧೆ೯ಗಳನ್ನು ಉದ್ಘಾಟಿಸಿ ಮಾತನಾಡಿದ ಮಡಿಕೇರಿಯ ವೈದ್ಯ ಡಾ.ರಾಜಾರಾಮ್ . ಸಮಾಜ ಒಂದಾಗಿ ಪ್ರತಿಬಿಂಬಿಸಲು ಕ್ರೀಡೆ ಅತ್ಯಂತ ಪ್ರಯೋಜನಕಾರಿಯಾಗಿದೆ. ದಕ್ಷಿಣ ಹಾಗೂ ಉತ್ತರ ಕೊಡಗು ಒಂದುಗೂಡಿ ಈ ಬಾರಿ ಬ್ರಾಹ್ಮಣ ಸಮಾಜದ ಕ್ರೀಡೆಯನ್ನು ಆಯೋಜಿಸಿದ್ದು, ಐಕ್ಯತೆಯ ಸೂಚಕವಾಗಿದೆ. ಸಮಾಜದ ಬಾಂಧವ್ಯ ವೃದ್ಧಿಗೆ ಇದು ಒಂದು ಉತ್ತಮವಾದ ಹಾದಿ. ಮಹಾಭಾರತದ ಕಾಲದಲ್ಲಿ ದ್ರೋಣಾಚಾರ್ಯರು ಐಕ್ಯತೆಗಾಗಿ ಕ್ರೀಡೆಗಳನ್ನು ಬಳಸಿದ್ದರು. ಸಮಾಜದ ಒಳಿತಿಗೆ ಹಾಗೂ ಬ್ರಾಹ್ಮಣರ ಒಗ್ಗೂಡುವಿಕೆಗೆ ಈ ಹೊಸ ಮಾರ್ಗ ಮುಂದಿನ ದಿನಗಳಲ್ಲಿ, ಸಮಾಜದ ಅಭ್ಯುದಯಕ್ಕೆ ಕಾರಣವಾಗಲಿದೆ ಎಂದು ಹೇಳಿದರು.  ಬ್ರಾಹ್ಮಣರಲ್ಲಿ ಸಹಜವಾಗಿ ನೆಲೆಸಿರುವಂತಹ ಗುಣಗಳೊಂದಿಗೆ, ಕ್ರೀಡೆಯಂತಹ ಮನೋಭಾವವನ್ನು ಬೆಳೆಸುವುದರ ಮೂಲಕ, ದೇಶಕ್ಕೆ ತಮ್ಮದೇ ಆದ ಕೊಡುಗೆಗಳನ್ನು ಕೊಡಲು ಇದು ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿ ಪರಿಣಮಿಸಲಿದೆ. ಆಟಗಾರರಿಗೆ ಹೊಸ ಜೀವನದ ಉತ್ಸಾಹ ಕೊಡುವುದರ ಜೊತೆಗೆ ಇನ್ನು ಮುಂದಿನ ವರ್ಷಗಳಲ್ಲಿ ಇನ್ನೂ ಹೆಚ್ಚಿನ ಆಟೋಟಗಳು, ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿ ಎಂದು ಡಾ.ರಾಜಾರಾಮ್ ಕರೆ ನೀಡಿದರು. ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಪ್ರಧಾನ ಕಾಯ೯ದಶಿ೯ ಬಿ.ಕೆ. ಜಗದೀಶ್ ಕ್ರೀಡಾ ಪಂದ್ಯಾವಳಿಯ ವರದಿ ವಾಚಿಸಿದರು. ಉಪಾಧ್ಯಕ್ಷ ಭರತೇಶ್ ಖಂಡಿಗೆ ಸ್ವಾಗತಿಸಿ, ಖಜಾಂಚಿ ಜಿ.ಆರ್. ರವಿಶಂಕರ್ ಅತಿಥಿ ಪರಿಚಯ ಮಾಡಿದರು. ನಿದೇ೯ಶಕರಾದ ಸವಿತಾ ಭಟ್, ಮಂಜುಳಾ ಭಟ್, ಬಿ.ಕೆ. ಅರುಣ್ ಕುಮಾರ್, ಪಿ.ವಿ. ಅಶೋಕ್ ನಿರೂಪಿಸಿದರು. ಜಿಲ್ಲೆಯಾದ್ಯಂತಲಿನಿಂದ ಬ್ರಾಹ್ಮಣ ಸಮುದಾಯದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದಭ೯ ಬ್ರಾಹ್ಮಣ ಸಮಾಜದ ಪ್ರತಿಭಾವಂತ ವಿದ್ಯಾಥಿ೯ಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ವಾಷಿ೯ಕ ಕ್ರೀಡೋತ್ಸವಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. :: ಸಾಧಕರಿಗೆ ಸನ್ಮಾನ ::  ಬ್ರಾಹ್ಮಣ ಸಮಾಜದ ನಾಲ್ವರು ಸಾಧಕರನ್ನು ಸನ್ಮಾನಿಸಲಾಯಿತು. ಕೊಡಗು ಮೂಲದ ಸಕಲೇಶಪುರದಲ್ಲಿ ನೆಲಸಿರುವ ಕಾಫಿ ಬೆಳೆಗಾರ ಕೋಗರವಳ್ಳಿ ಶಾಮರಾವ್, ಚೇರಂಬಾಣೆಯ ವೈದ್ಯ ಡಾ. ಶಂಕರನಾರಾಯಣ ಉರಾಳ, ವಿರಾಜಪೇಟೆಯ ನಿವೖತ್ತ ಶಿಕ್ಷಕಿ ಹೆಚ್ ಜಿ. ಸಾವಿತ್ರಿ, ಗಾಂಧಾರಿ ವಿದ್ಯೆಯಲ್ಲಿ ನಿಪುಣ ಗೋಣಿಕೊಪ್ಪಲುವಿನ ಪ್ರದ್ಯೋತ್ ಕಿರಣ್ ಅವರನ್ನು ಕಾಯ೯ಕ್ರಮದಲ್ಲಿ ಸನ್ಮಾನಿಸಲಾಯಿತು.

 

 

Share. Facebook Twitter Pinterest LinkedIn Tumblr Email WhatsApp
Previous Article*ಕೂಡ್ಲೂರು ಪ್ರೌಢಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ : ಸಂವಿಧಾನದ ಪಾಲನೆ ಹಾಗೂ ರಕ್ಷಣೆ ಎಲ್ಲರ ಹೊಣೆ : ಟಿ.ಜಿ.ಪ್ರೇಮಕುಮಾರ್*
Next Article *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟನೆ*

Related Posts

*ಸಾಂತ್ವನ ಮಹಿಳಾ ಸಹಾಯವಾಣಿ : ಕೊಡಗಿನಲ್ಲಿ 5657 ಪ್ರಕರಣಗಳು ಇತ್ಯರ್ಥ*

February 11, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಕಾಯಕ ಶರಣರ ಜಯಂತಿ ಸಮ ಸಮಾಜ ನಿರ್ಮಾಣದಲ್ಲಿ ಕಾಯಕ ಶರಣರ ಕೊಡುಗೆ ಅಪಾರ: ಹೇಮಲತಾ*

February 10, 2026

ಮಡಿಕೇರಿ,  NEWS DESK ಫೆ.10:-ಹನ್ನೆರಡನೇ ಶತಮಾನದಲ್ಲಿ ಬಸವಣ್ಣ ಅವರ ನೇತೃತ್ವದಲ್ಲಿ ಅನುಭವ ಮಂಟಪದಲ್ಲಿ ಹಲವು ಕಾಯಕ ಶರಣರು ವರ್ಣ ವ್ಯವಸ್ಥೆ,…

*ಸೌಂದರ್ಯ ತಜ್ಞರು ನಿತ್ಯ ವ್ಯಾಯಾಮದೊಂದಿಗೆ ತಮ್ಮ ಆರೋಗ್ಯ ವೃದ್ಧಿಸಿಕೊಳ್ಳುವ ಬಗ್ಗೆ ಗಮನಹರಿಸಬೇಕು ಎಂದು ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ತಾತಪಂಡ ಜ್ಯೋತಿ ಸೋಮಯ್ಯ ಕಿವಿಮಾತು ಹೇಳಿದರು*

February 10, 2026

*ಮೈಸೂರು-ಕುಶಾಲನಗರ ರೈಲ್ವೆ ಯೋಜನೆ ಪುನಾರಂಭಿಸಲು ಅಶ್ವಿನ್‌ ವೈಷ್ಣವ್‌ಗೆ ಯದುವೀರ್‌ ಮನವಿ ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಸಂಸದರ ಪತ್ರ*

February 10, 2026

*ಕೊಡವ ಭಾಷೆಗೂ ಸಾಂವಿಧಾನಿಕ ಭದ್ರತೆ ನೀಡಬೇಕು : ಸಣ್ಣ ಸಣ್ಣ ಭಾಷೆಗಳನ್ನು ಹತ್ತಿಕಿದರೆ ಏಕತೆಗೆ ದಕ್ಕೆ : ಸಿಎನ್‌ಸಿ ಪ್ರತಿಪಾದನೆ*

February 10, 2026

*ಫೆ.14 ರಂದು ಕೊಡವ ಭವನ ಉದ್ಘಾಟನೆ*

February 10, 2026

*ಮಡಿಕೇರಿಯಲ್ಲಿ “ಆರೋಗ್ಯ ಹಕ್ಕಿನ ಜಾಥಾ”*

February 10, 2026

*ಕೊಡವ ಕುಟುಂಬಗಳ ನಡುವಣ “ಮುಲ್ಲೇಂಗಡ ಕಬಡ್ಡಿ ನಮ್ಮೆ”*

February 10, 2026

*104 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ಹಸ್ತಾಂತರಿಸಿದ ಕೊಡಗು ಜಿಲ್ಲಾ ಪೊಲೀಸ್*

February 10, 2026

*ತಾಲ್ಲೂಕು ಮಟ್ಟದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನ*

February 10, 2026

*ಫೆ.15ರಂದು ಗೌಡ ಜನಾಂಗಗಳ ಜಿಲ್ಲಾ ಮಟ್ಟದ ಕ್ಯಾರಂಬೋರ್ಡ್ ಕ್ರೀಡಾಕೂಟ : ಏಪ್ರಿಲ್ ನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್*

February 10, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.