



ಮಡಿಕೇರಿ ಜ.29 NEWS DESK : ಗೌಡ ಈವ್ನಿಂಗ್ ಸ್ಟಾರ್ ಸಂಘದ ವತಿಯಿಂದ ಏ.13 ರಿಂದ ಹದಿನೈದು ದಿನಗಳ ಕಾಲ ಮರಗೋಡಿನ ಭಾರತೀ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್, ಹಗ್ಗಜಗ್ಗಾಟ ಮತ್ತು ಮನೋರಂಜನಾ ಕಾರ್ಯಕ್ರಮಗಳ “ಗೌಡ ಕುಟುಂಬ ಕಲರವ-2026” ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕಟ್ಟೆಮನೆ ರೋಷನ್ ಅವರು ಗೌಡ ಕುಟುಂಬ ಕಲರವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೌಡ ಕುಟುಂಬಗಳ ಸುಮಾರು 100 ರಿಂದ 150 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಈ ಬಾರಿ ಯಾವುದೇ ಕುಟುಂಬ ತಂಡದಲ್ಲಿ ಆಟಗಾರರ ಕೊರತೆ ಇದ್ದಲ್ಲಿ ಮಹಿಳಾ ಆಟಗಾರರನ್ನು ಸೇರಿಸಿಕೊಳ್ಳಲು ಅವಕಾಶವನ್ನು ನೀಡಿರುವುದಲ್ಲದೆ, ಅವರಿಗೆ ಥ್ರೋ ಬೌಲಿಂಗ್‍ಗೂ ಅವಕಾಶ ನೀಡಲಾಗಿದೆ ಎಂದರು. ಆಸಕ್ತ ತಂಡಗಳು ಮಾ.31ರ ಒಳಗಾಗಿ ನೋಂದಣಿ ಶುಲ್ಕ 3 ಸಾವಿರ ರೂ.ಗಳೊಂದಿಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಆಸಕ್ತರು ಮಗೇರನ ರಂಜು ಮೊ.8762249317, ಬಿದ್ರುಪಣೆ ದೀಪು ಮೊ.9482395358, ಬೊಳ್ಳೂರು ಮುನ್ನ ಮೊ.9483678377 ನ್ನು ಸಂಪರ್ಕಿಸಬಹುದು. ಗೌಡ ಸಮೂಹದ ಕುಟುಂಬವಾರು ಹಗ್ಗ ಜಗ್ಗಾಟ ಸ್ಪರ್ಧೆ ಏ.25 ಮತ್ತು 26 ರಂದು ನಡೆಯಲಿದೆ. ಈ ಸ್ಪರ್ಧೆಯಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕ ವಿಭಾಗ ಇರುವುದಿಲ್ಲ. ಇದಕ್ಕೆ ಬದಲಾಗಿ ಪ್ರತಿ ತಂಡದಲ್ಲಿ ತಲಾ ನಾಲ್ವರು ಪುರುಷರು ಮತ್ತು ಮಹಿಳೆಯರು ಇರಲೇಬೇಕೆಂದು ಸ್ಪಷ್ಟಪಡಿಸಿದರು. ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳು ಏ.20ರ ಒಳಗಾಗಿ ನೋಂದಣಿ ಶುಲ್ಕ 1500 ರೂ.ಗಳೊಂದಿಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಬೇಕು. ಇದಕ್ಕಾಗಿ ಕಾಂಗೀರ ಮೋನಿಶ್ ಮೊ.9008538932 ನ್ನು ಸಂಪರ್ಕಿಸಬಹುದು. ವಿಜೇತ ತಂಡಗಳಿಗೆ ಒಟ್ಟು 5 ಲಕ್ಷ ರೂ. ನಗದು ಬಹುಮಾನ ಮತ್ತು ಟ್ರೋಫಿಗಳನ್ನು ವಿತರಿಸಲಾಗುತ್ತದೆ. ಇದರೊಂದಿಗೆ ವೈಯಕ್ತಿಕ ಬಹುಮಾನಗಳನ್ನು ಕೂಡ ನೀಡಲಾಗುತ್ತದೆ ಎಂದು ಕಟ್ಟೆಮನೆ ರೋಷನ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗೌಡ ಈವ್ನಿಂಗ್ ಸ್ಟಾರ್ ನ ಕಾರ್ಯದರ್ಶಿ ಕರ್ಣಯನ ವಿವೇಕ್, ಸಂಚಾಲಕರುಗಳಾದ ಬೊಳ್ಳುರ ಪ್ರಸನ್ನ, ಮಗೇರನ ರಂಜು, ಸದಸ್ಯರುಗಳಾದ ಮುಕ್ಕಾಟಿ ಸೋನ ಹಾಗೂ ಮುಕ್ಕಾಟಿ ಮೋನಿಷ್ ಉಪಸ್ಥಿತರಿದ್ದರು.












