ಮಡಿಕೇರಿ NEWS DESK ಫೆ.8 : ಕೊಡಗಿನ ಮೂಲನಿವಾಸಿ 21 ಕೊಡವ ಭಾಷಿಕ ಸಮುದಾಯಗಳ ವತಿಯಿಂದ ಏಪ್ರಿಲ್ ತಿಂಗಳಿನಲ್ಲಿ ಇದೇ ಪ್ರಥಮ ಬಾರಿಗೆ ನಡೆಸುತ್ತಿರುವ ‘ದೇಶೀಯ ಕ್ರೀಡೋತ್ಸವ’ಕ್ಕೆ ಅನುದಾನ ಕೋರಿ ಕೊಡವ ಭಾಷಿಕ ಕೂಟವು ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಅವರಿಗೆ ಮನವಿ ಸಲ್ಲಿಸಿತು. ಕೊಡವ ಭಾಷಿಕ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಅವರ ನೇತೃತ್ವದಲ್ಲಿ ವಿರಾಜಪೇಟೆಯಲ್ಲಿ ಅರುಣ್ ಮಾಚಯ್ಯ ಅವರನ್ನು ಭೇಟಿಯಾದ ನಿರ್ದೇಶಕರುಗಳು ಹಾಗೂ ಸಮುದಾಯಗಳ ಮುಖಂಡರುಗಳು ಕ್ರೀಡೋತ್ಸವದ ಯಶಸ್ಸಿಗೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.









