ಮಡಿಕೇರಿ ಫೆ.8 : ಕೊಡವ ಭಾಷಿಕ ಮೂಲನಿವಾಸಿ ಕೆಂಬಟ್ಟಿ ಸಮುದಾಯದ ವತಿಯಿಂದ ಪ್ರಥಮ ಬಾರಿಗೆ ‘ಕೆಂಬಟ್ಟಿ ಜಾನಪದ ನಮ್ಮೆ’ಯನ್ನು ನಡೆಸಲಾಗುತ್ತಿದ್ದು, ಅಗತ್ಯ ಸಹಕಾರ ಕೋರಿ ಕೆಂಬಟ್ಟಿ ಸಮುದಾಯದ ನಿಯೋಗ ವಿರಾಜಪೇಟೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿತು. ನಿಯೋಗದಲ್ಲಿ ಅಧ್ಯಕ್ಷ ಬಿಲ್ಲರೀಕುಟ್ಟಡ ಪ್ರಭು ಐಯ್ಯಪ್ಪ, ನಿರ್ದೇಶಕರುಗಳಾದ ಬಾಳೆಕುಟ್ಟಡ ಉದಯ್ ಮಾದಪ್ಪ, ಪೆಗ್ಗೋಲಿ ದಿನೇಶ್, ಚವರೆಕುಟ್ಟಡ ಜೀವನ್, ಕೋಪರೆ ಕುಟ್ಟಡ ಸಾಗರ್ ಪೊವಣ್ಣ, ಚಿಮ್ಮಿಕುಟ್ಟಡ ನಿತೇಶ್, ಪ್ರಮುಖರಾದ ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಬಿದ್ದಣ ಕುಟ್ಟಡ ಕಿರಣ್ ಕಾವೇರಪ್ಪ, ಮೊಟ್ಟ ಕುಟ್ಟಡ ಭೋಜಮ್ಮ, ಜೋ ಕುಟ್ಟಡ ವ್ಯೆಶಾಲಿ ಪ್ರಕಾಶ್, ಬಿದ್ದಣಡ ಕುಟ್ಟ ರೋಹಿಣಿ ಪುಪ್ಪ, ಚಿಮ್ಮಿಡ ಕುಟ್ಟ ಗಿರೀಶ್ ಬೆಳ್ಳಿಪ್ಪ, ಚೋಕುಟ್ಟಡ ಸಂತೋಸ್, ಉತ್ತು ಕುಟ್ಟಡ ಮನು ಬಿದ್ದಪ್ಪ, ಬಿಲ್ಲಿರಿ ಕುಟ್ಟಡ ಮಂಜೇಶ್, ಚವರೆ ಕುಟ್ಟಡ ಸುಬ್ರಮಣಿ, ಚಿಮ್ಮಿಕುಟ್ಟಡ ವಿಲ್ಮ ಅಶೋಕ್, ಚವರೆಡ ಕುಟ್ಟ ಸುಬ್ಬಕ್ಕಿ ಮುತಪ್ಪ ಮತ್ತಿತರರು ಹಾಜರಿದ್ದರು.








