ಮಡಿಕೇರಿ NEWS DESK ಫೆ.9 : ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯದಲ್ಲಿ ಫೆ.11 ಮತ್ತು 12ರಂದು ನಾಗದೇವರ ಪುನಃಪ್ರತಿಷ್ಠಾಪನಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಲಿದೆ. ಫೆ.11 ರಂದು ಸಂಜೆ 7 ಗಂಟೆಗೆ ಗುರುಗಣಪತಿ ಪೂಜೆ, ಪುಣ್ಯಾಹ ಸಂಕಲ್ಪ ‘ಆಶ್ಲೇಷಬಲಿ’ ಮಹಾಪೂಜೆ ನಡೆಯಲಿದೆ ಮತ್ತು ತೀರ್ಥಪ್ರಸಾದ ವಿತರಣೆಯಾಗಲಿದೆ. ಫೆ.12 ರಂದು ಬೆಳಗ್ಗೆ 9 ಗಂಟೆಯಿಂದ ಗುರುಗಣಪತಿ ಪೂಜೆ, ಗಣಪತಿ ಹೋಮ, ನವಕ ಪ್ರಧಾನ ಕಲಶ, ನವಕ ಪ್ರಧಾನ ಹೋಮ, ಕಲಶಾಭಿಷೇಕ, ಪವಮಾನ ಪಾರಾಯಣ, ಅಲಂಕಾರ ಪೂಜೆ, ಮಹಾಪೂಜೆ ಮತ್ತು ತೀರ್ಥಪ್ರಸಾದ ವಿತರಣೆ ನಡೆಯಲಿದೆ. ನಾಗದೇವರ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕುಂದುರುಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದೆ.








