ಮಡಿಕೇರಿ, NEWS DESK ಫೆ.14 : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಇತ್ತೀಚೆಗೆ ಆನೆ ದಾಳಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮದೆನಾಡು ಗ್ರಾಮದ ಪಟ್ಟಡ ಭರತ್ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದರು.
ಗಾಯಾಳು ಭರತ್ ಗೆ ಧೈರ್ಯ ತುಂಬಿದ ಶಾಸಕರು ವೈಯುಕ್ತಿಕ ಧನ ಸಹಾಯ ನೀಡಿದರು. ನಂತರ ಚಿಕಿತ್ಸೆಯ ಕುರಿತು ವೈದ್ಯರಲ್ಲಿ ಚರ್ಚಿಸಿದರು. ಈ ಸಂದರ್ಭ ಪ್ರಮುಖರಾದ ಇಸ್ಮಾಯಿಲ್, ಕೊಲ್ಯದ ಗಿರೀಶ್, ಸೂರಜ್ ಹೊಸೂರು, ಪಟ್ಟಡ ದೀಪಕ್, ಕೊಡಗನ ತೀರ್ಥ ಪ್ರಸಾದ್, ಪಟ್ಟಡ ಕುಮಾರ್ ಮತ್ತಿತರರು ಹಾಜರಿದ್ದರು.








