Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*
  • *ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*
  • *3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*
  • *ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*
  • *ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*
  • *ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*
  • ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು
  • *ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*
  • *ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*
  • *ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ತೊರೆನೂರು ವಿರಕ್ತಮಠದಲ್ಲಿ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೆ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ತೊರೆನೂರು ವಿರಕ್ತಮಠದಲ್ಲಿ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೆ*

ಫೆಬ್ರವರಿ 19, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಮನುಷ್ಯ ನಿರ್ಮಿಸಲಾಗದ ಭಗವಂತನ ಸೃಷ್ಟಿಯ ನದಿ,ಸರೋವರಗಳು, ನೀರು,ಮಣ್ಣು, ಗಾಳಿ ಮೊದಲಾದ ಸುಂದರ ಪರಿಸರವನ್ನು ನಾವು ಹದಗೆಡಿಸದೇ ಸುಮ್ಮನಿದ್ದರೆ ಸಾಕು ಅದೇ ನಾವು ಭಗವಂತನಿಗೆ ಸಲ್ಲಿಸುವ ಕಾಣಿಕೆ ಎಂದು ಸುತ್ತೂರು ವೀರಸಿಂಹಾಸನ ಪೀಠದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಅಭಿಪ್ರಾಯಿಸಿದರು. ಕುಶಾಲನಗರ ತಾಲ್ಲೂಕು ತೊರೆನೂರು ವಿರಕ್ತ ಮಠದಲ್ಲಿ ಹಿರಿಯ ಶ್ರೀ ಮಹಾಂತ ಸ್ವಾಮೀಜಿ ಸಂಸ್ಮರಣೋತ್ಸವ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ಹನ್ನೆರಡನೇ ಶತಮಾನದ ಶರಣರ ಚಿಂತನೆಗಳು ಎಲ್ಲಾ ಕಾಲಘಟ್ಟಕ್ಕೂ ಪ್ರಸ್ತುತ ವಾಗಿದ್ದು, ಎಲ್ಲಾ ವಚನಗಳಲ್ಲಿ ವೈಜ್ಞಾನಿಕ ನೆಲೆಗಟ್ಟು ಇದೆ.
ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನಷ್ಟೇ ಸಮಾನ ಅವಕಾಶಗಳು ಎಲ್ಲಾ ಶರಣರಿಗಿತ್ತು. ಸಮಾನತೆಗಾಗಿ ಹೋರಾಟ ಇನ್ನೂ ಜೀವಂತವಾಗಿರುವುದು ವಿಷಾದನೀಯ. ಭಗವಂತ ಭಕ್ತನ ನಡುವಿನ ನೇರ ಒಡನಾಟವೇ ಇಷ್ಟಲಿಂಗ ಪರಿಕಲ್ಪನೆ. ಸಾಮಾಜಿಕವಾಗಿ ಮೌಲ್ಯಯುತವಾದ ಜೀವನ ನಡೆಸಲು ಪೂರಕ.
ಅಂತರಂಗ ಬಹಿರಂಗದ ಮದಗಳು ದೂರವಾದರೆ ಭಗವಂತನ ಬಳಿ ಹೋಗುತ್ತೇವೆ. ಭಗವಂತನ ಸೃಷ್ಟಿ ಹೊರತಾಗಿ ಮನುಷ್ಯನ ಸೃಷ್ಟಿ ಏನೇನೂ ಈ ಭೂಮಿಯಲ್ಲಿ ಇಲ್ಲ. ನಾನತ್ವ, ಅಹಂಕಾರ ಎರಡೂ ಕೂಡ ವಿನಾಶಕ್ಕೆ ಮೂಲ. ನಿಜವಾದ ಜ್ಞಾನಿಯಾದವ ನಿತ್ಯವೂ ಕಲಿಕೆಯತ್ತ ನಿರತನಾಗಿರಬೇಕು ಎಂದು ಶ್ರೀಗಳು ಹೇಳಿದರು. ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಅನುಭಾವದ ನುಡಿಗಳಾಡಿ ಸದ್ಭಾವನೆ, ಸತ್ ಚಿಂತನೆ, ಸನ್ನಡತೆ ಪ್ರತಿಯೊಬ್ಬರಲ್ಲೂ ಅಂತರ್ಗತವಾಗಬೇಕು. ಸಮಾಜದಲ್ಲಿ ಇಂದಿನ ಬಹಳಷ್ಟು ಮಂದಿಯ ದುಃಖಕ್ಕೆ ಆಸೆಯೇ ಮೂಲವಾಗಿದ್ದು, ಹನ್ನೆರಡನೇ ಶತಮಾನದ ಮಹಾಶರಣೆ ಆಯ್ದಕ್ಕಿ ಲಕ್ಕಮ್ಮನ ಆದರ್ಶಗಳನ್ನು ಅರಿಯಬೇಕಿದೆ. ಸದ್ಬಿಚಾರ ಸನ್ನಡತೆ, ಅನುಭಾವದ ಚಿಂತನೆಗಳತ್ತ ತೆರೆದುಕೊಳ್ಳುವ ಮೂಲಕ
ಮಾನಸಿಕ ತುಮುಲಗಳನ್ನು ದೂರ ಮಾಡಬೇಕಿದೆ. ಅಧಿಕಾರ, ಆಸ್ತಿ ಅಂತಸ್ತುಗಳ ಹಿಂದೆ ಹೋಗಿ ನೆಮ್ಮದಿ ಹಾಳು ಮಾಡಿಕೊಳ್ಳಬಾರದು ಎಂದು ನುಡಿದ ಅಶೋಕ್ ಸಂಗಪ್ಪ ಕಾಯಕ ಹಾಗು ದಾಸೋಹ ಪರಿಕಲ್ಪನೆ ಕುರಿತು ವಿಮರ್ಶಿಸಿದರು.


ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನ ಪದ್ಧತಿಯಿಂದಾಗಿ ನೈತಿಕ ಮೌಲ್ಯಗಳು ನಶಿಸುತ್ತಿದ್ದು, ಇಂದಿನ ಮಕ್ಕಳಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣದ ಅಗತ್ಯವಿದೆ. ಈಗ ಮನುಷ್ಯನಿಗೆ ಎಲ್ಲವೂ ಇದೆ. ಆದರೆ ಯಾರಿಗೂ ನೆಮ್ಮದಿಯ ಹುಡುಕಾಟದಲ್ಲಿದ್ದಾರೆ. ದ್ವೇಷ ಅಸೂಯೆ ಗಳಲ್ಲಿ ಜನ ಮುಳುಗಿದ್ದಾರೆ. ಬಹಳಷ್ಟು ಸಂಪಾದಿಸಿದರೂ ಕೂಡ ಬರಿಗೈಲಿ ಹೋಗುವ ಮನುಷ್ಯ ಪ್ರಕೃತಿ ಸಂಪತ್ತನ್ನು ನಾಶ ಮಾಡಿರುವ ಪರಿಣಾಮವೇ ತಾಪಮಾನ ಏರಿಕೆ. ಭೂಮಿ ಮೇಲೆ ಪ್ರಾಣಿ ಪಕ್ಷಿಗಳಷ್ಟು ನೆಮ್ಮದಿಯ ಜೀವನ ಮನುಷ್ಯನಿಗೆ ಇಲ್ಲ. ಜಾಗತಿಕ ತಾಪಮಾನ ಹೆಚ್ಚುತ್ತಿದೆ. ವಾಯುಭಾರ ಕುಸಿಯುತ್ತಿದೆ. ಹವಾಗುಣದ ತಾಳ ತಪ್ಪಿದೆ. ಹಾಗಾಗಿ ಇಂದು ಪರಿಸರ ಸಮ್ಮೇಳನ ಎಲ್ಲೆಡೆ ಅಗತ್ಯವಿದೆ ಎಂದು ರಾಮಸ್ವಾಮಿ ಹೇಳಿದರು.

ತೊರೆನೂರು ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಸಮಾಜದ ವಿವಿಧ ಕ್ಷೇತ್ರಗಳ ಶಿರಂಗಾಲದ ಎಸ್.ವಿ.ನಂಜುಂಡಪ್ಪ, ಮರೂರಿನ ಹೆಚ್.ವಿ.ಶಿವರುದ್ರಪ್ಪ, ಕುಶಾಲನಗರದ ಡಾ.ಹೇಮಲತಾ, ತೊರೆನೂರಿನ ಟಿ.ಬಿ.ಜಗದೀಶ್ ಅವರನ್ನು ಗೌರವಿಸಲಾಯಿತು.
ಬೆಟ್ಟದಪುರ ಮಠದ ಶ್ರೀ ಚನ್ನವೀರದೇಶೀಕೇಂದ್ರ ಸ್ವಾಮೀಜಿ, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ಹಾಸನದ ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ ಸ್ವಾಮೀಜಿ, ಚಿಲುಮೆ ಮಠದ ಶ್ರೀ ಜಯದೇವ ಸ್ವಾಮೀಜಿ, ವಿರಾಜಪೇಟೆ ಅರಮೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ, ಸೋಮವಾರ ಪೇಟೆಯ ಶ್ರೀ ನಿಶ್ಚಲನಿರಂಜನ ಸ್ವಾಮೀಜಿ, ಮನೆಹಳ್ಳಿ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ ಇದ್ದರು.
ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಸಾಂಬಶಿವಯ್ಯ, ಕೋಶಾಧಿಕಾರಿ ಹೆಚ್.ಪಿ.ಉದಯಕುಮಾರ್, ಕುಶಾಲನಗರ ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ತೊರೆನೂರು ಹೆಚ್.ಬಿ.ಚಂದ್ರಪ್ಪ ಮೊದಲಾದವರಿದ್ದರು.
ಶಿಕ್ಷಕಿ ಡಿ.ಎಂ.ಮಹದೇವಿ ನಿರೂಪಿಸಿದರು. ಬಸವರಾಜು ಸ್ವಾಗತಿಸಿದರು. ಕೆ.ಎಸ್.ಮೂರ್ತಿ ವಂದಿಸಿದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಯುಕೊ ಅಧ್ಯಕ್ಷ ಮಂಜು ಚಿಣ್ಣಪ್ಪಗೆ ಸನ್ಮಾನ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ವಿಶ್ವ ಪರಂಪರೆಯ ತಾಣಗಳು ನಮ್ಮ ಇತಿಹಾಸದ ಸಾಕ್ಷಿಗಳು : ಬರಹ : ಗೀತಾಂಜಲಿ ಎನ್.ಎಂ. ಸೋಮವಾರಪೇಟೆ*

ಏಪ್ರಿಲ್ 18, 2026 ಇತ್ತೀಚಿನ ಸುದ್ದಿಗಳು ಕರ್ನಾಟಕ ವಿಶೇಷ

(*ಬರಹ : ಗೀತಾಂಜಲಿ ಎನ್.ಎಂ ಸೋಮವಾರಪೇಟೆ ) ಮಡಿಕೇರಿ ಏ.18 NEWS DESK : ಮಾನವ ಸಮಾಜದ ಬೆಳವಣಿಗೆ ಕೇವಲ…

*3000 ಉದ್ಯೋಗ ಸೃಷ್ಟಿ: ಕೊಡಗು ಉದ್ಯೋಗ ಮೇಳಕ್ಕೆ ಚಾಲನೆ*

ಏಪ್ರಿಲ್ 18, 2026

*ಕುಶಾಲನಗರ ಬಲಿಜ ಸಮಾಜದಿಂದ ಕೈವಾರ ತಾತಯ್ಯ ಜಯಂತಿ ಆಚರಣೆ*

ಏಪ್ರಿಲ್ 18, 2026

*ಕುಶಾಲನಗರ : ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಅಗ್ನಿ ‌ಅವಘಡಗಳ‌ ಕುರಿತು ವಿಶೇಷ ಕಾರ್ಯಾಗಾರ*

ಏಪ್ರಿಲ್ 18, 2026

*ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.19 ರಂದು ನಡೆಯುವ ಪಂದ್ಯಗಳು*

ಏಪ್ರಿಲ್ 18, 2026

ಬೇತ್ರಿ ಮುಕ್ಕಾಟಿರ ಕಪ್ ಕ್ರಿಕೆಟ್ ನಮ್ಮೆ : ಏ.18 ರಂದು ಗೆಲುವು ಸಾಧಿಸಿದ ತಂಡಗಳು

ಏಪ್ರಿಲ್ 18, 2026

*ಮಡಿಕೇರಿ : ರಾಜ್ಯ ಮಟ್ಟದ “ಮೊಗೇರ ಕ್ರೀಡಾಕೂಟ” ಉದ್ಘಾಟನೆ*

ಏಪ್ರಿಲ್ 18, 2026

*ಕಾಂಗ್ರೆಸ್ ಮುಖವಾಡ ಕಳಚಿಬಿದ್ದಿದೆ : ಕೊಡಗು ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026

*ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್ ಸೂಚನೆ*

ಏಪ್ರಿಲ್ 18, 2026

*ಮಹಿಳೆಯರಿಗೆ ಅಧಿಕಾರ ನೀಡುವುದನ್ನು ಸಹಿಸದ ಕಾಂಗ್ರೆಸ್ : ಸೋಮವಾರಪೇಟೆ ಬಿಜೆಪಿ ಅಸಮಾಧಾನ*

ಏಪ್ರಿಲ್ 18, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.