ಮಡಿಕೇರಿ, NEWS DESK ಫೆ.19 : ಟ್ರ‍್ಯಾಕ್ಟರ್ ಹಳ್ಳಕ್ಕೆ ಮಗುಚಿದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಬಾಗಲಕೋಟೆಯ ನಿವಾಸಿ ಪ್ರವೀಣ್ (35) ಮೃತ ದುರ್ದೈವಿ. ಚಾಲಕನಿಲ್ಲದ ಸಂದರ್ಭ ಟ್ರ‍್ಯಾಕ್ಟರ್ ಚಲಾಯಿಸುವ ದುಸ್ಸಾಹಸಕ್ಕೆ ಪ್ರವೀಣ್ ಕೈಹಾಕಿದ ಪರಿಣಾಮ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ನಿಯಂತ್ರಣ ತಪ್ಪಿದ ಟ್ರ‍್ಯಾಕ್ಟರ್ ಹಳ್ಳಕ್ಕೆ ಮಗುಚಿದ್ದು, ಪ್ರವೀಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.







