
ಪಾಲಿಬೆಟ್ಟ ಫೆ.19 NEWS DESK : ಅಮ್ಮತ್ತಿ-ಪಾಲಿಬೆಟ್ಟ ಲಯನ್ಸ್ ಕ್ಲಬ್ ಗೆ ಗವರ್ನರ್ ಕುಡ್ಪಿ ಅರವಿಂದ ಶೆಣೈ ವಾರ್ಷಿಕ ಭೇಟಿ ಸಮಾರಂಭದಲ್ಲಿ ಪಾಲ್ಗೊಂಡರು. ಪಾಲಿಬೆಟ್ಟ ಅನುಗ್ರಹ ಲಯನ್ಸ್ ಭವನ ದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಅಂತರಾಷ್ಟ್ರೀಯ ಸಂಸ್ಥೆ ಜಗತ್ತಿನ 210 ದೇಶಗಳಲ್ಲಿ ಸುಮಾರು 50 ಸಾವಿರ ಗ್ರಾಮಗಳಲ್ಲಿ ಕೆಲಸ ನಿರ್ವಹಿಸುತ್ತಿದೆ. 14 ಲಕ್ಷ ಸದಸ್ಯತ್ವದಲ್ಲಿ ಭಾರತದಲ್ಲಿ 3 ಲಕ್ಷ ಸದಸ್ವತ ಹೊಂದಿದ್ದು, ಲಯನ್ಸ್ 317 ಡಿ ಸಂಸ್ಥೆಗಳಲ್ಲಿ ನಾಲ್ಕುವರೆ ಸಾವಿರ ಸದಸ್ಯರಿದ್ದಾರೆ ಜಿಲ್ಲೆಯಲ್ಲಿ 12 ಕ್ಲಬ್ ಗಳು ಕಾರ್ಯ ನಿರ್ವಹಿಸುತ್ತಿದ್ದು ಇದರಲ್ಲಿ ಐವತ್ತು ವರ್ಷಗಳು ಪೂರೈಸಿರುವ ಪಾಲಿಬೆಟ್ಟ ಲೈನ್ಸ್ ಕ್ಲಬ್ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ, ಪರಿಸರ ಸೇರಿದಂತೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದು ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಸಮೀಪದ ಅಮ್ಮತ್ತಿ ಕ್ಲಬ್ ಕೂಡ ಎಂಟು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದ ಅವರು ಸಂಸ್ಥೆ ಮೂಲಕ ಸಂಘಟಿತರಾಗಿ ಸೇವಾ ಮನೋಭಾವದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನ ಎಂದರು. ಪಾಲಿಬೆಟ್ಟ ಲಯನ್ಸ್ ಕ್ಲಬ್ ಅಧ್ಯಕ್ಷ ಪಿ.ಎಸ್.ಸುಬ್ರಮಣಿ ಮಾತನಾಡಿ ಸದಸ್ಯರ ಸಹಕಾರದೊಂದಿಗೆ ಲಯನ್ಸ್ ಕ್ಲಬ್ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದ್ದು ಆರೋಗ್ಯ,ಶಿಕ್ಷಣ, ಪರಿಸರ, ಜಾಗೃತಿ ಸೇರಿದಂತೆ ಹಲವಾರು ಆರೋಗ್ಯ ಶಿಬಿರಗಳನ್ನ ಆಯೋಜಿಸಲಾಗಿದ್ದು ಶಾಲೆಗಳ ಅಭಿವೃದ್ಧಿಗೂ ಸಹಕಾರ ನೀಡಲಾಗಿದೆ ಎಂದು ಹೇಳಿದ ಅವರು 50 ವರ್ಷ ಪೂರೈಸಿರುವ ಲಯನ್ಸ್ ಕ್ಲಬ್ ಮತ್ತಷ್ಟು ಜನಪರ ಕಾರ್ಯಗಳನ್ನ ಮಾಡಲಾಗುವುದು ಎಂದು ಹೇಳಿದರು. ಇದೇ ಸಂದರ್ಭ ಪಾಲಿಬೆಟ್ಟ ಹಾಗೂ ಅಮ್ಮತಿ ಲಯನ್ಸ್ ಕ್ಲಬ್ ವತಿಯಿಂದ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈ ಮತ್ತು ಮಮತಾ ಶೆಣೈ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಲಯನ್ಸ್ ಕ್ಲಬ್‌ಗಳ ಪ್ರಾಂತ್ಯ ಅಧ್ಯಕ್ಷರಾದ ಡಾ.ಕೋಟೆರ ಪಂಚಮ್ ತಿಮ್ಮಯ್ಯ ಅಮ್ಮತ್ತಿ ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಎಸ್.ಪೂಣಚ್ಚ, ಕಾರ್ಯದರ್ಶಿ ಯು.ಟಿ.ಕಾರ್ಯಪ್ಪ, ಖಜಾಂಚಿ ಕೋಡೀರ ದಿನೇಶ್, ಪಾಲಿಬೆಟ್ಟ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸದಾ ಕುಶಾಲಪ್ಪ, ಖಜಾಂಚಿ ಜಿ.ಜಿ.ಭವಿಷ್ಯ ಕುಮಾರ್, ಸೇರಿದಂತೆ ಲಯನ್ಸ್ ಕ್ಲಬ್ ನ ಹಲವಾರು ಪದಾಧಿಕಾರಿಗಳು ಪ್ರಮುಖರು ಹಾಜರಿದ್ದರು.









