
ನಾಪೋಕ್ಲು ಫೆ.23 NEWS DESK : ಕಾರುಗುಂದ ಗೌಡ ಸಮಾಜ ಮತ್ತು ಚೇರಂಬಾಣೆ ಗೌಡ ಯುವ ವೇದಿಕೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಗೌಡ ಜನಾಂಗಗಳ ಕ್ಯಾರಂಬೋರ್ಡ್ ಕ್ರೀಡಾಕೂಟದ ಪುರುಷರ ವಿಭಾಗದ ಸಿಂಗಲ್ಸ್ ನಲ್ಲಿ ಇಂದ್ರೇಶ್ ಕುದುಕುಳಿ ಪ್ರಥಮ ಮತ್ತು ಡಬಲ್ಸ್ ನಲ್ಲಿ ಭರತ್ ಕಾವೇರಿಮನೆ ಪ್ರಥಮ, ಮಕ್ಕಳ ಡಬಲ್ಸ್ ವಿಭಾಗದಲ್ಲಿ ಗೌರವ್ ಕುದುಕುಳಿ ಪ್ರಥಮ, ಸಿಂಗಲ್ಸ್ ವಿಭಾಗದಲ್ಲಿ ದ್ರುವ ಸುಳ್ಯಕೋಡಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಹರಪ್ಪನಹಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ ಕುಶಾಲಪ್ಪ, ಕೊಡುಪಾಲು ಎಸ್ ಗಣಪತಿ, ಕಡ್ಲೇರ ತುಳಸಿ ಮೋಹನ್, ಕೇಕಡ ದಿನೇಶ್ ಮತ್ತು ಬೆಳ್ಯನ ಚಂದ್ರಪ್ರಕಾಶ್ ಉದ್ಘಾಟಿಸಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು. :: ಕ್ರೀಡಾಕೂಟದ ವಿಜೇತರು :: ಪುರುಷರ (ದೊಡ್ಡವರ) ವಿಭಾಗದಲ್ಲಿ ಸಿಂಗಲ್ಸ್ ನಲ್ಲಿ ದ್ವಿತೀಯ-ಕೆದಂಬಾಡಿ ತಿಮ್ಮಯ್ಯ. ಹಾಗೂ ಡಬಲ್ಸ್ ನಲ್ಲಿ ದ್ವಿತೀಯ – ಇಂದ್ರೇಶ್ ಕದುಕುಳಿ . ಹಾಗೂ ಮಕ್ಕಳ ವಿಭಾಗದಲ್ಲಿ ಡಬಲ್ಸ್ ಮೋಹಿತ್ ಕುದುಕುಳಿ ದ್ವಿತೀಯ ಮೋನಿಶ್ ಕೆಟೋಳಿ ಮತ್ತು ಪಾರ್ಥ ಕೊಡಗನ. ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ – ಡೀನ್ ಬೊಳ್ಳೂರು ಇವರುಗಳು ವಿಜೇತರಾದರು. ವಿವರಗಳಿಗೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು. ಇದೇ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಸುವುದಾಗಿ ಆಯೋಜಕರು ತಿಳಿಸಿವರು.
ವರದಿ : ದುಗ್ಗಳ ಸದಾನಂದ.









