

ಚೆಟ್ಟಳ್ಳಿ NEWS DESK ಮಾ.19 : ಒತ್ತೋರ್ಮೆರ ಕೊಡವ ಕೂಟದ ಅಧ್ಯಕ್ಷರಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಕಾರ್ಯದರ್ಶಿಯಾಗಿ ಮಾಚಂಗಡ ಸಚಿನ್ ತಮ್ಮಯ್ಯ ಹಾಗೂ ಖಜಾಂಚಿಯಾಗಿ ಕಾಳಮಂಡ ರಾಬಿನ್ ಅಚ್ಚಮ್ಮ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ಮಾತಂಡ ಕುಶಿ ಉನ್ನತಿ, ಸಹ ಕಾರ್ಯದರ್ಶಿಯಾಗಿ ಅಳ್ಳಂಡ ಶಹನಾ ಚೋಂದಮ್ಮ, ಸಹ ಖಜಾಂಚಿಯಾಗಿ ಮಾಳೇಟಿರ ಯಶ್ಮ ಬೋಜಮ್ಮ, ನಿರ್ದೇಶಕರಾಗಿ ಪೊನ್ನೋಲತಂಡ ಶರಣು ತಮ್ಮಯ್ಯ, ಬಾಡಮಾಡ ದೇಚಮ್ಮ, ಕರ್ನಂಡ ಧನುಶ್ರೀ, ಚೈಯ್ಯಂಡ ಕೀರ್ತನ್ ಅಯ್ಯಪ್ಪ ಹಾಗೂ ಭೂಮಿಕಾ ಮಾಚಂಗಡ ನೇಮಕಗೊಂಡಿದ್ದಾರೆ. ಒತ್ತೋರ್ಮೆರ ಕೊಡವ ಕೂಟದ ಸಭೆಯಲ್ಲಿ ನೂತನ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು. ಸದಸ್ಯರಾದ ಮೊಣ್ಣoಡ ವಿನು ಕಾರ್ಯಪ್ಪ, ಮೂಕೊಂಡ ಸಂಜನಾ ದಮಯತಿ ಮತ್ತಿತರರು ಉಪಸ್ಥಿತರಿದ್ದರು.








