

ಮಡಿಕೇರಿ NEWS DESK ಏ.23 : ಕೊಡಗು ಜಿಲ್ಲೆಯ ಇಬ್ಬರು ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿಯ ಒಟ್ಟು 625 ಅಂಕಕ್ಕೆ 621 ಅಂಕವನ್ನು ಪಡೆದು ಪ್ರಥಮ ಸ್ಥಾನ ಹೊಂದಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಲಿನ್ಸಿ ದೇಚಮ್ಮ ಟಿ.ಟಿ. ಅವರು 621, ಹಾಗೆಯೇ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯ ಸಿಂಚನ ಕೆ.ಐ. ಅವರು 621 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಉಳಿದಂತೆ ವಿರಾಜಪೇಟೆ ಸಂತ ಅನ್ನಮ್ಮ ಪ್ರೌಢ ಶಾಲೆಯ ಡೀನ್ ಸೆಲ್ವ ಡಿ’ಸೋಜ 620, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢ ಶಾಲೆಯ ಶಿವಾನಿ ಶಾರದಮಣಿ, ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ಯು.ಎಸ್.ಶ್ರೀವತ್ಸ, ಗೋಣಿಕೊಪ್ಪ ಕಳತ್ಮಾಡುವಿನ ಲಯನ್ಸ್ ಪ್ರೌಢ ಶಾಲೆಯ ಸಿದ್ಧಾರ್ಥ ಕಾವೇರಪ್ಪ ಇವರು 619 ಅಂಕ ಪಡೆದಿದ್ದಾರೆ. ನಗರದ ಸಂತ ಜೋಸೆಫರ ಸಂಯುಕ್ತ ಪ್ರೌಢ ಶಾಲೆಯ ಸೋನಶ್ರೀ ಕೆ.ಇ., ಗೋಣಿಕೊಪ್ಪ ಸೆಂಟ್ ಥಾಮಸ್ ಪ್ರೌಢ ಶಾಲೆಯ ನಮನ ಈ ಇಬ್ಬರು 618 ಅಂಕ ಪಡೆದಿದ್ದಾರೆ. ಉಳಿದಂತೆ ಸೋಮವಾರಪೇಟೆಯ ಅವರ್ ಲೇಡಿ ಆಫ್ ವಿಕ್ಟೋರಿಯಸ್ ಪ್ರೌಢ ಶಾಲೆಯ ತಾನ್ವಿ, ವಿರಾಜಪೇಟೆಯ ಶ್ರೀ ಕಾವೇರಿ ಪ್ರೌಢ ಶಾಲೆಯ ಮೊಹಮ್ಮದ್ ಶಿಫಾನ್, ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢ ಶಾಲೆಯ ರೆನಿತ್ ಎಂ. ಈ ಮೂವರು 617 ಅಂಕ ಪಡೆದಿದ್ದಾರೆ.







