
ಮಡಿಕೇರಿ NEWS DESK ಏ.27 : ಕರ್ನಾಟಕ ಕುಂಗ್ ಫೂ ಸಂಸ್ಥೆಯ ವತಿಯಿಂದ ಸೋಮವಾರಪೇಟೆಯಲ್ಲಿ ಕುಂಗ್ ಫೂ ಕಲರ್ ಬೆಲ್ಟ್ ಪರೀಕ್ಷೆ ನಡೆಯಿತು. ಚನ್ನಬಸಪ್ಪ ಹಾಲ್ ನಲ್ಲಿ ನಡೆದ ಪರೀಕ್ಷೆಯಲ್ಲಿ 30 ವಿದ್ಯಾರ್ಥಿಗಳಿಗೆ ಕಲರ್ ಬೆಲ್ಟ್ ವಿತರಿಸಲಾಯಿತು. ಕರ್ನಾಟಕ ಕುಂಗ್ ಫೂ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಷ್ಟ್ರೀಯ ತರಬೇತುದಾರ ಎನ್.ಸಿ.ಸುದರ್ಶನ್ ಅವರ ನೇತೃತ್ವದಲ್ಲಿ ಪರೀಕ್ಷಕ ಚಂದ್ರು ಡಿ. ಪರೀಕ್ಷೆ ನಡೆಸಿಕೊಟ್ಟರು.

















