
ಮಡಿಕೇರಿ ಮೇ 4 NEWS DESK : ಪ್ರಸಕ್ತ (2026-27) ಸಾಲಿಗೆ ಡಾ||ಎ.ಪಿ.ಜೆ ಅಬ್ದುಲ್ ಕಲಾಂ ವಸತಿ ಕಾಲೇಜು, ಕೊಡ್ಲಿಪೇಟೆ, ಹಾಗೂ ಮಹಿಳಾ ಪದವಿ ಪೂರ್ವ ಕಾಲೇಜು ಕುಶಾಲನಗರ ಇಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ, ಕನ್ನಡ, ಇಂಗ್ಲಿಷ್, ಹಿಂದಿ, ಭೌತಶಾಸ್ತ್ರ, ಜೀವಶಾಸ್ತ್ರ, ರಾಸಾಯನಶಾಸ್ತ್ರ, ಗಣಿತ, ಇತಿಹಾಸ, ಉರ್ದು, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಕಂಪ್ಯೂಟರ್ ವಿಜ್ಞಾನ ಈ ವಿಷಯಗಳಲ್ಲಿ ಪದವಿ ಪಡೆದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅರ್ಜಿಯೊಂದಿಗೆ ದೃಢೀಕೃತ ದಾಖಲೆಗಳನ್ನು ಮೇ, 12 ರಂದು ಸಂಜೆ 5 ಗಂಟೆ ಒಳಗೆ ಜಿಲ್ಲಾ ಕಚೇರಿ ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಇಲ್ಲಿಗೆ ಸಲ್ಲಿಸಲು ಸೂಚಿಸಿದೆ. ಈ ವಿಷಯಗಳಿಗೆ ಅನುಗುಣವಾಗಿ ಅತಿಥಿ ಉಪನ್ಯಾಸಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಮೇ, 12 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಮೌಲಾನಾ ಆಜಾದ್ ಭವನ, ಎಫ್‍ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕಚೇರಿ ದೂ.ಸಂ.08272-225528 ಮತ್ತು ಪ್ರಾಂಶುಪಾಲರು, ಡಾ|| ಎಪಿಜೆ ಅಬ್ದುಲ್ ಕಲಾಂ ಪದವಿ ಪೂರ್ವ ವಸತಿ ಕಾಲೇಜು, ಕೊಡ್ಲಿಪೇಟೆ ದೂ.ಸಂ. 7975251179 ಹಾಗೂ ಪ್ರಾಂಶುಪಾಲರು ಮಹಿಳಾ ಪದವಿ ಪೂರ್ವ ಕಾಲೇಜು, ಕುಶಾಲನಗರ ದೂ.ಸಂ. 6361802037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಿ.ಎಂ.ದಿವಾಕರ ಅವರು ತಿಳಿಸಿದ್ದಾರೆ.








