Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*
  • *ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*
  • *ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*
  • *ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*
  • *ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್
  • *ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*
  • *ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*
  • *ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*
  • *ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*
  • *ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ವಿರಾಜಪೇಟೆಯಲ್ಲಿ ಸಂಭ್ರಮದಿಂದ ನಡೆದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ*

ಮೇ 4, 20263 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
oplus_0
Facebook Twitter WhatsApp Email Telegram Copy Link
SM Fitness Advertisement

ವಿರಾಜಪೇಟೆ ಮೇ 4 NEWS DESK : ವಿಷು ಹಬ್ಬದ ಪ್ರಯುಕ್ತ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ವಿರಾಜಪೇಟೆಯ ತಾಲೂಕು ಮೈದಾನದಲ್ಲಿ ಪ್ರಥಮ ವರ್ಷದ ವಿಶು ಕಣಿ ಪೂಜೆ ಹಾಗೂ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಕಾರ್ಯಕ್ರಮದ ಅಂಗವಾಗಿ ವೇದಿಯ ಮುಂಭಾಗದಲ್ಲಿ ವಿಶು ಕಣಿ ಪೂಜೆಯನ್ನು ಹಿರಿಯರು ಮಾಡಿದರು. ಬಳಿಕ ಮಲಯಾಳಿ ಬಾಂಧವರಿಗೆ ಕೈನೀಟಂ ನೀಡಲಾಯಿತು. ಕಾರ್ಯಕ್ರಮದಲ್ಲಿ ವಿಷು ಹಬ್ಬದ ಮಹತ್ವ ಸೇರಿದಂತೆ ಹಬ್ಬದ ವಿಷು ಕಣಿ ಮಡಗುವ ರೀತಿ, ದೀಪವನ್ನು ಹಚ್ಚುವುದು, ಸಾಂಪ್ರಾದಾಯಿಕವಾಗಿ ವಿಷು ಕಣಿ ಇಡುವ ಮತ್ತು ಆಚರಿಸುವ ರೀತಿಯನ್ನು ಪ್ರಸ್ತುತ ಪಡಿಸಲಾಯಿತು. ಮತ್ತು ಇಂದಿನ ಯುವಜನತೆಗೆ ವಿಷು ಹಬ್ಬದ ಮಹತ್ವವನ್ನು ತಿಳಿಯಪಡಿಸಿದರು. ಬಳಿಕ ಮೈದಾನದ ಮಧ್ಯಭಾಗದಲ್ಲಿ ದೇಪವನ್ನು ಬೆಳಗುವ ಮೂಲಕ ತಿರುವಾದಿರ ನೃತ್ಯ ಪ್ರದರ್ಶನಕ್ಕೆ ಅತಿಥಿ ಗಣ್ಯರು ಚಾಲನೆ ನೀಡಿದರು. ವಿಶು ಹಬ್ಬದ ಅಂಗವಾಗಿ ಹಿಂದೂ ಮಹಿಳಾ ಮಲಯಾಳಿ ಬಂಧುಗಳಿಂದ ಮೆಗಾ(100ಕ್ಕೂ ಹೆಚ್ಚು ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿರುವ) ತಿರುವಾದಿರ ನೃತ್ಯವನ್ನು ಪ್ರಸ್ತುತ ಪಡಿಸಲಾಯಿತು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಮಲಯಾಳಿ ಸಮಾಜದ ಅಧ್ಯಕ್ಷ ವಿಜಯನ್, ಸುಖ ಸಮೃದ್ಧಿ ಸಂದೇಶದೊಂದಿಗೆ ವರ್ಷವಿಡೀ ಐಶ್ವರ್ಯದ ಸಂಕೇತವಾಗಿ ಕೇರಳೀಯರ ವಿಷು ಹಬ್ಬ ಏ.15ರಂದು ಆಚರಿಸಲಾಗುವುದು. ಇದರ ಅಂಗವಾಗಿ ಕೊಡಗಿನಲ್ಲಿ ನೆಲೆ ನಿಂತಿರುವ ಮಲಯಾಳಿಗಳು ವಿಶು ಹಬ್ಬವನ್ನು ಅತ್ಯಂತ ವಿಜೃಂಬಣೆಯಿಂದ ಇಲ್ಲಿ ಆಚರಿಸುತ್ತಾರೆ. ಕೊಡಗು ಕೇರಳದ ಗಡಿಭಾಗದಲ್ಲಿರುವುದರಿಂದ ಹೆಚ್ಚಿನ ಮಲಯಾಳಿಗಳು ಕೊಡಗಿನಲ್ಲಿದ್ದು ಅವಿನಾಭಾವ ಸಂಬಂಧ ಹೊಂದಿದ್ದಾರೆ. ಮೆಗಾ ತಿರುವಾದಿರ ನೃತ್ಯ ಪ್ರದರ್ಶನ ನಿಜಕ್ಕೂ ಶ್ಲಾಘನೀಯ. ಮಲಯಾಳಿಗಳಿಗೆ ಓಣಂ ಹಾಗೂ ವಿಶು ಹಬ್ಬ ಪ್ರಮುಖವಾದದ್ದು. ತುಳುನಾಡಿನಲ್ಲಿ ಬಿಸು ಪರ್ಬವಾಗಿಯೂ, ಕಾಸರಗೋಡಿನಲ್ಲಿ ತುಳುನಾಡಿನ ಹಾಗೂ ಕೇರಳೀಯ ಸಂಸ್ಕೃತಿಯೂ ಸೇರಿಕೊಂಡಿರುವುದಕ್ಕೆ ವಿಷು ಹಬ್ಬಕ್ಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ‘ಕಣಿ ಕಾಣುವ ಹಬ್ಬ’ ಎಂದೇ ವಿಶೇಷತೆಯನ್ನು ಹೊಂದಿದೆ. ವರ್ಷದ ಆರಂಭದಲ್ಲಿ ಮೊದಲ ನೋಟದಲ್ಲಿ ಆರಾಧ್ಯ ದೇವರನ್ನು ನೋಡುವ ಕ್ರಮವೇ ಕಣಿ ಕಾಣುವುದಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿರಾಜಪೇಟೆ ತಾಲೂಕು ಬಿಲ್ಲಸ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ. ಗಣೇಶ್ ಮಾತನಾಡಿ, ವಿಷು ದಿನವನ್ನು ಕೇರಳದಾದ್ಯಂತ ವಿಷು ಹಬ್ಬವನ್ನಾಗಿ ಸಂಭ್ರಮದಿಂದ ಆಚರಿಸುತ್ತಾರೆ. ವಿಷು ಎಂದರೆ ಕಣಿಕಾಣುವ ಹಬ್ಬ. ಮೇಷ ಮಾಸದ ಮೊದಲ ದಿನವೇ ವಿಷು ಕಣಿ. ಹೊಸ ವರ್ಷದ ಆರಂಭದ ದಿನ ಒಳ್ಳೆಯ ಕಣಿ ಕಂಡರೆ ವರ್ಷವಿಡೀ ಶ್ರೇಯಸ್ಸು ಉಂಟಾಗುತ್ತದೆ ಎಂಬ ನಂಬಿಕೆ ಇದರ ಹಿಂದಿದೆ ಎಂದರು. ವಿರಾಜಪೇಟೆ ತಾಲೂಕು ಗೌಡ ಸಮಾಜದ ಉಪಾಧ್ಯಕ್ಷ ಪಿ.ಟಿ. ರಮೇಶ್ ಹಾಗೂ ಮಹಿಳಾ ಆಯೋಗದ ಸದಸ್ಯರಾದ ಶರತ್ ಕಾರ್ಯಕ್ರಮಕ್ಕೆ ಶುಭ ಕೋರಿದರು. ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಅಮ್ಮುಣಿಚಂಡ ರವಿ ಉತ್ತಪ್ಪ ಮಾತನಾಡಿ ಓಣಂ ಕೊಯ್ಲಿನ ಹಬ್ಬವಾದರೆ, ವಿಷು ಬಿತ್ತನೆಯ ಹಬ್ಬ ಎಂಬುದು ಹಿಂದಿನ ಪರಂಪರಾಗತ ರೀತಿಯಲ್ಲಿ ಆಚರಿಸಿಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಹಿಂದೆ ವಿಷು ಹಬ್ಬದ ದಿನ ಗದ್ದೆ ಹೂಳುವ, ಬಿತ್ತುವ ಮೂಲಕ ಕೃಷಿಗೆ ಪ್ರಾರಂಭ ನಡೆಸುತ್ತಿದ್ದರು ಎಂದರು. ವಿರಾಜಪೇಟೆ ವರ್ತಕರ ಸಂಘದ ಅಧ್ಯಕ್ಷ ಪಿ.ಎ. ಮಂಜುನಾಥ್ ಹಾಗೂ ವಿರಾಜಪೇಟೆ ಲಿಟಲ್ ಸ್ಕಾಲರ್ ಅಕಾಡೆಮಿ ಮುಖ್ಯಸ್ಥೆ ಪೂಜಾ ಸಜೇಶ್ ಮಾತನಾಡಿ ವಿಷು ಹಬ್ಬದ ಪ್ರಯುಕ್ತ ನಡೆಸುತ್ತಿರುವ ಗ್ರಾಮೀಣ ಕ್ರೀಡಾಕೂಟ ಹಾಗೂ ಮೆಗಾ ತಿರುವಾದಿರ ನೃತ್ಯ ಪ್ರದರ್ಶನ ನಿಜವಾಗಲೂ ಮೆಚ್ಚುವಂತದ್ದು. ವಿಷು ಹಬ್ಬ ಇಂದು ಆಚರಣೆಯಾದ ಹಾಗೆ ಭಾಷವಾಗುತ್ತಿದೆ. ಇಲ್ಲಿ ವಿಷು ಕಣಿಯ ಬಗ್ಗೆ ತಿಳಿಯಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕಾರ್ಯಕ್ರಮಗಳು ಆಯೋಜನೆಗೊಳ್ಳಬೇಕು. ಇದಕ್ಕೆ ತಮ್ಮಿಂದ ಆದ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಜಿ. ಸುಮೇಶ್ ಮಾತನಾಡಿ ದೂರವಾಗುತ್ತಿರುವ ಸಾಂಪ್ರದಾಯಿಕ ಉತ್ಸವಗಳ ಕ್ರಮ, ಬದಲಾಗುತ್ತಿರುವ ಜೀವನ ರೀತಿಯ ನಡುವೆಯೂ ವಿಷು ಹಬ್ಬವನ್ನು ನೆನಪಿಸುವ ಹಿಂದಿನ ಸಾಂಪ್ರದಾಯಿಕ ಆಟಗಳ ಮಹತ್ವ ವಿಶೇಷತೆಯನ್ನು ಪಡೆದಿದೆ. ವಿಷು ದಿನದಂದು ಮನೆ ಮನೆಗಳಲ್ಲಿ, ದೇವಾಲಯಗಳಲ್ಲಿ ತಮ್ಮದೇ ಆದ ಶೈಲಿಯಲ್ಲಿ ಆಚರಿಸಿಕೊಳ್ಳುವ ಸಂಪ್ರದಾಯವಾಗಿದೆ. ಮೋಜಿನ ಆಟದೊಂದಿಗೆ, ವಿಶೇಷ ಔತಣದೊಂದಿಗೆ ಆಚರಿಸುವ ವಿಷು ಹಬ್ಬ, ಸೌರಮಾನ ಯುಗಾದಿ ಮೇಷ ಸಂಕ್ರಮಣದ ಮರು ದಿನ ಹೊಸ ವರ್ಷ ಆರಂಭ. ಇದೇ ಸೌರಮಾನ ಯುಗಾದಿ ಅಥವಾ ವಿಷು ಆಗಿದೆ ಎಂದರಲ್ಲದೆ ಹಬ್ಬದ ಮಹತ್ವ, ತಿರುವಾದಿರ ನೃತ್ಯ ಆಯೋಜನೆ ಹಾಗೂ ಸಮಾಜದ ಮುಖಾಂತರ ಮಾಡುತ್ತಾ ಬಂದಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು, ಸೇವೆಯನ್ನು ವಿವರಿಸಿದರು. ವೇದಿಕೆಯಲ್ಲಿ ವಿರಾಜಪೇಟೆ ಎಸ್ ಎನ್ ಡಿಪಿ ಅಧ್ಯಕ್ಷ ನಾರಾಯಣನ್, ಯೋಗ ಶಿಕ್ಷಕರಾದ ಸುಶೀಲ, ಮುತ್ತಪ್ಪ ದೇವಾಲಯದ ಗೌರವಾಧ್ಯಕ್ಷ ಗೋವಿಂದನ್, ಬಾಬು, ಹಿರಿಯರಾದ ಕಲ್ಲುಬಾಣೆ ಮುತ್ತಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಟಿ.ಕೆ. ನಾರಾಯಣ ಇದ್ದರು. ಬಳಿಕ ಪುರುಷರಿಗೆ, ಮಹಿಳೆಯರಿಗೆ ವಿವಿಧ ಗ್ರಾಮೀಣ ಕ್ರೀಡಾಕೂಟ ನಡೆಯಿತು. ಬಳಿಕ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಿರುವಾದಿರ ನೃತ್ಯ ಪ್ರಧರ್ಶನ ನೀಡಿದವರಿಗೆ ಪರಿತೋಷಕ ನೀಡಿದರು. ಮರಗಾ ತಿರುವಾದಿರ ನೃತ್ಯವನ್ನು ಮಹಿಳೆಯರು ಹಾಗೂ ಮಕ್ಕಳಿಗೆ ಎರಡುವರೆ ತಿಂಗಳುಗಳ ಕಾಲ ಹೆಗ್ಗಳ ಗ್ರಾಮದ ಕವಿತಾ ಪ್ರಸಾದ್ ಅವರು ತರಬೇತಿ ನೀಡಿದ್ದರು. ಇದೇ ಸಂದರ್ಭ ಕವಿತಾ ಅವರನದನು ಸಮಾಜದ ವತಿಯಿಂದ ಗೌರವಿಸಲಾಯಿತು. ಮಲಯಾಳಿ ಸಮಾಜದ ಉಪಾಧ್ಯಕ್ಷರಾದ ಸಿ.ಆರ್ ಸಜೀವನ್ ಹಾಗೂ ಆಡಳಿತ ಮಂಡಳಿಯವರ ನೇತೃತ್ವದಲ್ಲಿ ವಿಷು ಕಣಿ ಇಡಲಾಗಿತ್ತು. ಇದರ ಅಂಗವಾಗಿ ವಿಷು ಕೈನೀಟಂ ಅನ್ನು ಹಿರಿಯರುಗಳಾದ ರುಕ್ಮಿಣಿ, ಕಾತ್ಯಾಯಿನಿ, ಟಿ.ಕೆ. ನಾರಾಯಣನ್, ಗೋವಿಂದನ್, ಹಾಗೂ ಪದ್ಮನಾಭ ಅವರುಗಳಿಂದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಸರ್ವ ಪದಾಧಿಕಾರಿಗಳು, ಹಾಗೂ ವಿವಿದೆಡೆಗಳಿಂದ ಆಗಮಿಸಿದ ಮಲಯಾಳಿ ಬಾಂಧವರು ಹಾಜರಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

*ನಿಟ್ಟೂರು ಕಾರ್ಮಾಡಿನಲ್ಲಿ ವನ್ಯಜೀವಿ ಸಪ್ತಾಹ: ಪ್ಲಾಸ್ಟಿಕ್ ತ್ಯಾಜ್ಯ ತೆರವು, ಪರಿಸರ ಜಾಗೃತಿ*

ಅಕ್ಟೋಬರ್ 9, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಅ.14 ರಂದು ಲೋಕಾಯುಕ್ತದಿಂದ ದೂರು ಅರ್ಜಿ ಸ್ವೀಕಾರ*

ಅಕ್ಟೋಬರ್ 8, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಮಡಿಕೇರಿ ಅ.8 NEWS DESK : ಕರ್ನಾಟಕ ಲೋಕಾಯುಕ್ತ ಮಡಿಕೇರಿಯ ಲೋಕಾಯುಕ್ತ ಅಧಿಕಾರಿಗಳು ಅಕ್ಟೋಬರ್, 14 ರಂದು ಬೆಳಗ್ಗೆ 11…

*ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಶಾಸಕ ಡಾ. ಮಂತರ್ ಗೌಡ ಅವರ ಅ.9ರ ಕಾರ್ಯಕ್ರಮ*

ಅಕ್ಟೋಬರ್ 8, 2026

*ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ : ಕೇಂದ್ರ ಪುರಸ್ಕೃತ ಯೋಜನೆ ಸಕಾಲದಲ್ಲಿ ಪ್ರಗತಿ ಸಾಧಿಸಿ : ಸಂಸದ ಯದುವೀರ್ ಒಡೆಯರ್

ಅಕ್ಟೋಬರ್ 8, 2026

*ಕಾವೇರಿ ತೀರ್ಥೋದ್ಭವ : ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಮನವಿ*

ಅಕ್ಟೋಬರ್ 8, 2026

*ಗಾಂಧಿ ಮೈದಾನಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ : ದಸರಾ ಸಿದ್ಧತೆ ಕುರಿತು ಪರಿಶೀಲನೆ*

ಅಕ್ಟೋಬರ್ 8, 2026

*ಬೆಂಗಳೂರು ಸಣ್ಣ ಭಾಷಾ ಚಲನಚಿತ್ರೋತ್ಸವಕ್ಕೆ ಕೊಡಗಿನ ‘ಬೇರ್’ ಆಯ್ಕೆ*

ಅಕ್ಟೋಬರ್ 8, 2026

*ಕರ್ನಾಟಕದಲ್ಲಿ ಭೀಕರ ಬರ: ಶೇ.90ರಷ್ಟು ಬೆಳೆ ಹಾನಿ, ರೈತರ ನೆರವಿಗೆ ಸರ್ಕಾರದ ಮಹತ್ವದ ಕ್ರಮ*

ಅಕ್ಟೋಬರ್ 8, 2026

*ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಿಯ ಕರಗೋತ್ಸವ: ಅ.11ರಿಂದ ನಗರ ಪ್ರದಕ್ಷಿಣೆ*

ಅಕ್ಟೋಬರ್ 8, 2026

*ಮಡಿಕೇರಿ ದಸರಾ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ ವಿಶೇಷ ಪ್ಯಾಕೇಜ್ ಟೂರ್*

ಅಕ್ಟೋಬರ್ 8, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.