
ಮಡಿಕೇರಿ ಜೂ.27 NEWS DESK : ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ ಮತ್ತು ಕಾಯ೯ದಶಿ೯ಯಾಗಿ ಮೃಣಾಲಿನಿ ಚಿಣ್ಣಪ್ಪ ಆಯ್ಕೆಯಾಗಿದ್ದಾರೆ. ನಗರದ ರೋಟರಿ ಸಭಾಂಗಣದಲ್ಲಿ ಜು.1 ರಂದು ಬೆಳಗ್ಗೆ 11.30 ಗಂಟೆಗೆ ಇನ್ನರ್ ವೀಲ್ ಸಂಸ್ಥೆಯ 51ನೇ ಅಧ್ಯಕ್ಷೆಯಾಗಿ ರಶ್ಮಿ ಪ್ರವೀಣ್ , ಕಾಯ೯ದಶಿ೯ಯಾಗಿ ಮೃಣಾಲಿನಿ ಚಿಣ್ಣಪ್ಪ ಅಧಿಕಾರ ಸ್ವೀಕರಿಸಲಿದ್ದು, ಇನ್ನರ್ ವೀಲ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆ ಡಾ. ಜಯಲಕ್ಷ್ಮಿ ಪಾಟ್ಕರ್ ಪದಗ್ರಹಣ ನೆರವೇರಿಸಲಿದ್ದಾರೆ.









