
ಮಡಿಕೇರಿ NEWS DESK ಜೂ.29 : ಈಗಾಗಲೇ ಕಂಡು ಬಂದಿರುವ ಹಾಗೆ ಪ್ರಸ್ತುತ 2026ರ ಮುಂಗಾರು ಮಳೆಯ ಕೊರತೆ ಸ್ಪಷ್ಟವಾಗಿ ಕಾಣುತ್ತಿದೆ. ಇದಕ್ಕೆ Geometeorology ಅಧ್ಯಯನದ ಮೂಲಕ ಕಂಡು ಬರುವ ಅಂಶವೆಂದರೆ ಭಾರತದ ಸುತ್ತಮುತ್ತಲು ಹಾಗೂ ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ಇರುವ ಆವಿಯ ಮೂಲಗಳಾದ ಜ್ವಾಲಾಮುಖಿಗಳ ಚಟುವಟಿಗಳು ತುಂಬಾ ಇಳಿಮುಖವಾಗಿರುವುದು. ಇವುಗಳ ಮುಂದಿನ ಆರು ತಿಂಗಳುಗಳ ಚಟುವಟಿಕೆಗಳ ಮುನ್ಸೂಚನಾ ವರದಿಗಳ ಅಧ್ಯಯನದಿಂದ ಕಂಡು ಬರುವುದೇನೆಂದರೆ 2026ರ ಹಿಂಗಾರು ಅವಧಿಯಾದ ಅಕ್ಟೋಬರ್ ನವೆಂಬರ್ ಡಿಸೆಂಬರ್ ತಿಂಗಳುಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ. ಅದರಿಂದಾಗಿ ಮತ್ತಷ್ಟು ಕೊರತೆ ಉಂಟಾಗುವ ಸಾಧ್ಯತೆ ಇದೆ. ಎಲ್ ನಿನೋ ಪರಿಸ್ಥಿತಿಗೂ ಸಹ ಸಮುದ್ರದೊಳಗಿನ ಭೀಕರ ಜ್ವಾಲಾಮುಖಿಗಳು ಕಾರಣ ಎನ್ನುವುದನ್ನು ವಿಜ್ಞಾನಿಗಳು ಗಮನಿಸಬೇಕು. ಇದರ ಬಗ್ಗೆ ಸರಕಾರ ಹಾಗೂ ಇತರ ಸಂಸ್ಥೆಗಳು ಸೂಕ್ತ ಮುಂಜಾಗರೂಕತೆಯ ಕ್ರಮಗಳನ್ನು ಜಾರಿಗೊಳಿಸಬೇಕೆಂದು ಈ ಮೂಲಕ ಕೋರುತ್ತೇನೆ. ( ಹೆಚ್.ಎಸ್.ಎಂ.ಪ್ರಕಾಶ್, ಭೂವಿಜ್ಞಾನಿ, ಬೆಂಗಳೂರು, 9535416639 )








