
ಮಡಿಕೇರಿ ಜೂ.25 NEWS DESK : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಲಸಿಕೆ ಪಡೆಯದೆ ವಂಚಿತರಾದ ಮಕ್ಕಳಿಗೆ ಪತ್ತೆ ಹಚ್ಚಲು 2 ದಿನ ಮನೆ ಮನೆಗಳಿಗೆ ಭೇಟಿ ಮಾಡುವ 2ನೇ ದಿನ ಮೂರ್ನಾಡು ವ್ಯಾಪ್ತಿಯ ಹೂಕಾಡು ಪೈಸಾರಿ ಗ್ರಾಮದ ಮನೆ ಮನೆಗಳಿಗೆ ತೆರಳಿ ಲಸಿಕೆ ಪಡೆಯಾದ ಮಕ್ಕಳಿಗೆ ಪತ್ತೆ ಹಚ್ಚಿ ಲಸಿಕೆ ನೀಡುವ ಕಾರ್ಯದಲ್ಲಿ ಆರೋಗ್ಯ ಸಿಬ್ಬಂದಿ ತಂಡಗಳು ಕಾರ್ಯನಿರ್ವಹಿಸಿದರು. ತಂಡಗಳ ಕಾರ್ಯವನ್ನು ಮೇಲ್ವಿಚಾರಣೆಗಾಗಿ ಡಾ.ಸನತ್ ಕುಮಾರ್ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಮತ್ತು ಪ್ರಭಾರ ತಾಲ್ಲೂಕು ಆರೋಗ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್, ಕಾರ್ಯಕ್ರಮ ವ್ಯವಸ್ಥಾಪಕರು ನಿಲಿಮ್ , ಹಾಗೂ ಪ್ರಾ.ಆ.ಸುರಕ್ಷಾಧಿಕಾರಿ ಶಿಲ್ಪಾ, ಅಂಗನವಾಡಿ ಕಾರ್ಯಕರ್ತೆ ಜಯಶ್ರೀ ಹಾಜರಿದ್ದರು.









