
ಸುಂಟಿಕೊಪ್ಪ ಜು.6 NEWS DESK : ಗಾಳಿ ಮಳೆಗೆ ಮನೆಯ ಗೋಡೆ ಕುಸಿದು ಲಕ್ಷಾಂತರ ರೂ ನಷ್ಟ ಉಂಟಾಗಿರುವರುವ ಘಟನೆ ಸುಟ್ಟಿಕೊಪ್ಪದ ಜನತಾ ಕಾಲೋನಿಯಲ್ಲಿ ನಡೆದಿದೆ. ಗ್ರಾಮದ ನಿವಾಸಿ ಎಲಿಜಬೆತ್ ಎಂಬವರ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿತಗೊಂಡಿದ್ದು, ಗೃಹ ಉಪಯೋಗಿ ವಸ್ತುಗಳು ಹಾನಿಗೀಡಾಗಿದೆ. ಇದರಿಂದ ಲಕ್ಷಾಂತರ ರೂ ನಷ್ಟ ಉಂಟಾಗಿದೆ. ಘಟನೆಯ ಸಂದರ್ಭ ಮನೆಯ ಮಂದಿ ಸೇರಿದಂತೆ ಸಣ್ಣ ಮಗುವಿದ್ದು, ಅದೃಷ್ಟವಶತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ದೀಪಿಕಾ, ಗ್ರಾಮ ಆಡಳಿತಾಧಿಕಾರಿ ಉಷಾ, ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.









