
ಮಡಿಕೇರಿ, ಜು.31 NEWS DESK : ಬೆಂಗಳೂರಿನ ಕೊರಮಂಗಲದ ಚಿನ್ಮಯ ವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ‘ಚಿನ್ಮಯ ಕಪ್–2026′ ಅಂತರಶಾಲಾ ರಾಜ್ಯಮಟ್ಟದ ರಿಂಕ್ ಹಾಕಿ (5–ಎ–ಸೈಡ್) ಪಂದ್ಯಾವಳಿಯಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳ 14 ವರ್ಷದೊಳಗಿನ ಬಾಲಕರ ತಂಡವು – ಚಾಂಪಿಯನ್ ಪಟ್ಟವನ್ನೂ,17 ವರ್ಷದೊಳಗಿನ ಬಾಲಕಿಯರ ತಂಡವು ಸತತವಾಗಿ ಎರಡನೇ ಬಾರಿಯೂ ಚಾಂಪಿಯನ್ ಪಟ್ಟವನ್ನೂ ಹಾಗೂ 17 ವರ್ಷದೊಳಗಿನ ಬಾಲಕರ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಪಂದ್ಯಾವಳಿಯ ಅತ್ಯುತ್ತಮ ಪ್ರದರ್ಶನಕ್ಕಾಗಿ 17 ವರ್ಷದೊಳಗಿನ ವಿಭಾಗದಲ್ಲಿ ಕೊಡಗು ವಿದ್ಯಾಲಯದ ತೇಜಲ್ ಬೋಪಣ್ಣ ಮತ್ತು 14 ವರ್ಷದೊಳಗಿನ ವಿಭಾಗದ ಎಂ.ಎಸ್. ಚಿನ್ನಪ್ಪ ಅವರು ಪಂದ್ಯಾವಳಿಯ ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ಪಡೆದರು. 17 ವರ್ಷದೊಳಗಿನ ವಿಭಾಗದಲ್ಲಿ ವರ್ಣ ಬೋಜಮ್ಮ ಅವರು ಪಂದ್ಯಾವಳಿಯ ಅತ್ಯುತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು. ಈ ಸಾಧನೆಗೆ ತರಬೇತುದಾರರಾದ ದೀನಾ ಹಾಗೂ ಪಾರ್ವತಿ ಅವರ ನಿಖರ ತರಬೇತಿ ಮತ್ತು ಮಾರ್ಗದರ್ಶನ ಪ್ರಮುಖ ಕಾರಣವಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ಸುಮಿತ್ರಾ ಕೆ ಎಸ್ ಹಾಗೂ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.









