
ಮಡಿಕೇರಿ NEWS DESK ಆ.3 : ರೋಟರಿ ಮಡಿಕೇರಿ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ನಡೆದ ಸಾಪ್ತಾಹಿಕ ಸಭೆಯಲ್ಲಿ ವೈದ್ಯರ ದಿನ ಹಾಗೂ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ಮಡಿಕೇರಿ ಅಧ್ಯಕ್ಷ ಮನೋಹರ್ ಕಾಮತ್ ಅವರು ಆರೋಗ್ಯ ಕ್ಷೇತ್ರದಲ್ಲಿ ವೈದ್ಯರು ಹಾಗೂ ಆರ್ಥಿಕ ಕ್ಷೇತ್ರದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಗಳು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ರೋಟರಿ ಸಂಸ್ಥೆಯಲ್ಲಿ ಸಕ್ರಿಯರಾಗಿರುವ ವೈದ್ಯರಾದ ಡಾ.ಕೆ.ರವಿ ಅಪ್ಪಾಜಿ, ಡಾ.ಸಂದೀಪ್ ಜೈಪುರ್ಕರ್, ಡಾ.ಎಂ.ಎ.ಕುಟ್ಟಪ್ಪ, ಡಾ.ರಾಘವನ್, ಡಾ.ಮಿನಲ್ ಜೈಪುರ್ಕರ್ ಹಾಗೂ ಡಾ.ಶಿಥಿಲ್ ಕುಟ್ಟಪ್ಪ, ಚಾರ್ಟರ್ಡ್ ಅಕೌಂಟೆಂಟ್ ಗಳಾದ ಈಶ್ವರ್ ಭಟ್, ಅಮರ್ ಶರ್ಮಾ ಹಾಗೂ ವಿನುತಾ ಶರ್ಮಾ ಅವರುಗಳ ಸೇವೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಸನ್ಮಾನಿಸಿ ಅಭಿನಂದಿಸಲಾಯಿತು. ರೋಟರಿ ಸದಸ್ಯ ಡಾ.ಸಂದೀಪ್ ಜೈಪುರ್ಕರ್ ಅವರು “Muscle Matters, Live Better” ವಿಷಯದ ಕುರಿತು ಉಪನ್ಯಾಸ ನೀಡಿದರು. ಉತ್ತಮ ಆರೋಗ್ಯಕ್ಕಾಗಿ ಸ್ನಾಯುಗಳ ಆರೈಕೆ, ನಿಯಮಿತ ವ್ಯಾಯಾಮ, ಸಮತೋಲನ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯ ಮಹತ್ವವನ್ನು ವಿವರಿಸಿದರು. ರೋ.ಮಲ್ಲಿಗೆ ಪೈ ಅವರು ನಗರಸಭಾ ಶಾಲಾ ಯೋಜನೆ ಕುರಿತು ಸಂಕ್ಷಿಪ್ತ ವರದಿ ಮಂಡಿಸಿದರು. ಯೋಜನೆಯ ಪ್ರಗತಿ ಹಾಗೂ ಸಮಾಜಮುಖಿ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ರೋಟರಿ ಪ್ರಮುಖರಾದ ರತನ್ ತಮ್ಮಯ್ಯ, ಮೃಣಾಲಿನಿ ಚಿಣ್ಣಪ್ಪ, ಸುದಯ್ ನಾಣಯ್ಯ, ಪಿ.ಟಿ.ಗಣಪತಿ, ಪಾರ್ವತಿ ಚೀಯಣ್ಣ, ಈರಮಂಡ ಹರಿಣಿ ವಿಜಯ್, ಪ್ರಿನ್ಸ್ ಪೊನ್ನಣ್ಣ, ಡಿ.ಎಂ.ಕಿರಣ್ ಮತ್ತಿತರರು ಉಪಸ್ಥಿತರಿದ್ದರು. ಅಧ್ಯಕ್ಷ ಮನೋಹರ್ ಕಾಮತ್ ಸ್ವಾಗತಿಸಿ, ಕಾರ್ಯದರ್ಶಿ ಬಿ.ಎಂ.ಸೋಮಣ್ಣ ವಂದಿಸಿದರು. ಕಾರ್ಯಕ್ರಮಕ್ಕೂ ಮೊದಲು ರೋಟರಿ ನಿಯಮದಂತೆ ಅಧ್ಯಕ್ಷರಿಗೆ ಕಾಲರ್ ಧಾರಣೆ ಮಾಡಲಾಯಿತು.









