
ಮಡಿಕೇರಿ NEWS DESK ಆ. 12 : ಅಂತರರಾಷ್ಟ್ರೀಯ ಖ್ಯಾತಿಯ ಟೆನ್ನಿಸ್ ಆಟಗಾರ ಮಚ್ಚಂಡ ರೋಹನ್ ಬೋಪಣ್ಣ, ಮಾದಾಪುರದಲ್ಲಿನ ಶ್ರೀಮತಿ ಡಿ.ಚೆನ್ಮಮ್ಮ ಪದವಿ ಪೂವ೯ ಕಾಲೇಜಿಗೆ ಭೇಟಿ ನೀಡಿ ವಿದ್ಯಾಥಿ೯ಗಳೊಂದಿಗೆ ಸಂವಾದ ನಡೆಸಿದರು. 2024ರ ಆಸ್ಟ್ರೇಲಿಯಾ ಓಪನ್ ಡಬಲ್ಸ್ ವಿಶ್ವ ನಂಬರ್ ಒನ್ ಶ್ರೇಯಾಂಕಿತ ಕ್ರೀಡಾತಾರೆ ,ಪದ್ಮಶ್ರೀ,ಏಕಲವ್ಯ ಅರ್ಜುನ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವ ಅಂತರಾಷ್ಟ್ರೀಯ ಟೆನಿಸ್ ಆಟಗಾರರಾಗಿದ್ದ ರೋಹನ್ ಬೋಪಣ್ಣ ವಿದ್ಯಾಥಿ೯ಗಳಿಗೆ ಕ್ರೀಡಾ ಕ್ಷೇತ್ರದ ಮಹತ್ವ ಮತ್ತು ಕ್ರೀಡಾಪಟುವಾಗಲು ಕೈಗೊಳ್ಳಬೇಕಾದ ಪೂವ೯ ತಯಾರಿಯ ಬಗ್ಗೆ ಕೆಲವೊಂದು ಸಲಹೆ ನೀಡಿದರು. ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ಧೃಡತೆಯಿಂದ ಮುಂದುವರೆದಲ್ಲಿ ಜೀವನದಲ್ಲಿ ಯಶಸ್ಸು ಖಂಡಿತಾ ಸಾಧ್ಯ.ಪ್ರತಿಯೊಬ್ಬರ ಜೀವನದಲ್ಲಿ ಅಡೆತಡೆಗಳು ಬರುವುದು ಸಾಮಾನ್ಯ . ಅವೆಲ್ಲವನ್ನು ಮೀರಿ ಮುನ್ನಗಬೇಕೆಂದು ರೋಹನ್ ಕಿವಿಮಾತು ಹೇಳಿದರು. ತಮ್ಮ ತ್ರಿದ ಫೌಂಡೇಶನ್ ಮೂಲಕ ಬಡ ಹೆಣ್ಣು ಮಕ್ಕಳ ಶಿಕ್ಷೆಣಕ್ಕೆ ಪ್ರೋತ್ಸಾಹ ನೀಡುತ್ತಿರುವ ರೋಹನ್ ಬೋಪಣ್ಣ ಅವರ ಸೇವಾ ಕಾರ್ಯವನ್ನು ಶ್ರೀಮತಿ ಡಿ.ಚೆನ್ಮಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ ಜಿ ವಿ ಕುಮಾರ್ ಶ್ಲಾಘಸಿದರು. ರೋಹನ್ ಬೋಪಣ್ಣ ಅವರ ಪತ್ನಿ ಸುಪ್ರಿಯ ಬೋಪಣ್ಣ ಆಡಳಿತ ಮಂಡಳಿಯ ಸದಸ್ಯ ಮಂಜುನಾಥ್, ಪ್ರಾಂಶುಪಾಲ ಮಂದಪ್ಪ, ಮುಖ್ಯ ಶಿಕ್ಷಕಿ ರೀಟಾ ಉಪನ್ಯಾಸಕರು, ಶಿಕ್ಷಕ ವೃಂದದವರು ಇದ್ದರು.









