Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *ಮಗ್ಗುಲ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ*
  • *ಕೊಡ್ಲಿಪೇಟೆಯಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ : ಮಕ್ಕಳ ಸಾತ್ವಿಕ ಬದುಕಿಗೆ ವಚನಗಳು ದಾರಿದೀಪ : ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ*
  • *ಬೆಟ್ಟಗೇರಿ ಉದಯ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆ*
  • *ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಸುವಲ್ಲಿ ಗ್ರಂಥಾಲಯದ ಪಾತ್ರ ಅಪಾರ : ಡಾ. ಕೆ.ಜಿ.ವೀಣಾ*
  • *ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಗೆ ಸದಸ್ಯರ ನೇಮಕ*
  • *ಮಾದರಿ ಅಂಗನವಾಡಿ ರೂಪಿಸುವಲ್ಲಿ ಬಾಲ ವಿಕಾಸ ಸಮಿತಿ ಹೊಣೆಗಾರಿಕೆ: ಸವಿತಾ ಕೀರ್ತನ್*
  • *ಮಡಿಕೇರಿ : ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ*
  • *ಮಡಿಕೇರಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ*
  • *ತಲಕಾವೇರಿಗೆ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಭೇಟಿ : ವಿಶೇಷ ಪೂಜೆ ಸಲ್ಲಿಕೆ*
  • *ಆನೆ-ಮಾನವ ಸಂಘರ್ಷಕ್ಕೆ ಅರಿವೇ ಶಾಶ್ವತ ಪರಿಹಾರ: ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಆನೆ-ಮಾನವ ಸಂಘರ್ಷಕ್ಕೆ ಅರಿವೇ ಶಾಶ್ವತ ಪರಿಹಾರ: ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಆನೆ-ಮಾನವ ಸಂಘರ್ಷಕ್ಕೆ ಅರಿವೇ ಶಾಶ್ವತ ಪರಿಹಾರ: ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಆಗಷ್ಟ್ 12, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ಕುಶಾಲನಗರ ಆ.12 NEWS DESK : ಆನೆ-ಮಾನವ ಸಹಬಾಳ್ವೆಯ ಕುರಿತು ಪ್ರತಿಯೊಬ್ಬರೂ ಅರಿವು ಮತ್ತು ಮಾಹಿತಿ ಹೊಂದುವ ಮೂಲಕ ಆನೆ-ಮಾನವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅಭಿಪ್ರಾಯಪಟ್ಟರು. ಕುಶಾಲನಗರದ ಕಾವೇರಿ ನಿಸರ್ಗಧಾಮದಲ್ಲಿ ವಿಶ್ವ ಆನೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ವನ್ಯಜೀವಿಗಳ ಸಂರಕ್ಷಣೆಯಲ್ಲಿ ಸಾರ್ವಜನಿಕರ ಸಹಯೋಗ ಅತ್ಯಂತ ಅಗತ್ಯ. ಯಾವುದೇ ಸಂದರ್ಭದಲ್ಲೂ ಜೀವಹಾನಿ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಸಾರ್ವಜನಿಕರಿಂದ ನಿರಂತರ ಸಹಕಾರ ದೊರೆತಲ್ಲಿ ವನ್ಯಜೀವಿ ಸಂಘರ್ಷ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳಿದರು. ಆನೆಗಳು ಸೇರಿದಂತೆ ಇತರ ವನ್ಯಜೀವಿಗಳ ಕುರಿತು ಮುಂದಿನ ಪೀಳಿಗೆಗೆ ಅರಿವು ಮತ್ತು ಜಾಗೃತಿ ಮೂಡಿಸುವುದು ಶಿಕ್ಷಕರು ಹಾಗೂ ಪೋಷಕರ ಜವಾಬ್ದಾರಿಯಾಗಿದೆ. ವನ್ಯಜೀವಿ ಸಂರಕ್ಷಣೆ ಕುರಿತು ಮಕ್ಕಳಲ್ಲಿ ಚಿಕ್ಕ ವಯಸ್ಸಿನಿಂದಲೇ ಜಾಗೃತಿ ಬೆಳೆಸಬೇಕು ಎಂದು ಅವರು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ವನ್ಯಜೀವಿ ತಜ್ಞ ವೈದ್ಯರಾದ ಡಾ. ಚಿಟ್ಟಿಯಪ್ಪ, ಡಾ. ಮುಜೀಬ್, ಡಾ. ಸಿ.ಕೆ. ತಮ್ಮಯ್ಯ, ಕೆ. ಭುವನೇಶ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಆನೆ ಸಂರಕ್ಷಣೆ, ವನ್ಯಜೀವಿ ಸಹಬಾಳ್ವೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಅರಣ್ಯ ಇಲಾಖೆಯ ಸಾಧಕ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದಕ್ಷಿಣ ಕೊಡಗಿನಲ್ಲಿ ವನ್ಯಜೀವಿ ಸಂಘರ್ಷದ ಸಂದರ್ಭ ಅರಣ್ಯ ಇಲಾಖೆಯೊಂದಿಗೆ ನಿರಂತರವಾಗಿ ಕೈಜೋಡಿಸುತ್ತಿರುವ ಬಿ. ಶೆಟ್ಟಿಗೇರಿಯ ಅನಿಲ್ ಕಾಡೆಮಾಡ, ಜಗ ಚೇರಂಡ ಹಾಗೂ ತಂಡದ ಸದಸ್ಯರನ್ನು ಇಲಾಖೆಯ ವತಿಯಿಂದ ಗೌರವಿಸಲಾಯಿತು. ವಿಶ್ವ ಆನೆ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕೊಡಗು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಟಿ ಅವರು ಆನೆಗಳ ಕುರಿತ ಮಾಹಿತಿಯುಳ್ಳ ಪೋಸ್ಟರ್‌ಗಳು ಹಾಗೂ ಕಿರುಹೊತ್ತಿಗೆಗಳನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಬಳಿಯಿಂದ ವಿದ್ಯಾರ್ಥಿಗಳ ಜಾಥಾ ನಡೆಯಿತು. ಜಾಥಾಕ್ಕೆ ಕುಶಾಲನಗರ ನ್ಯಾಯಾಧೀಶೆ ಚೈತ್ರ ಅವರು ಹಸಿರು ನಿಶಾನೆ ತೋರಿಸಿದರು. ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಅಭಯ ಶಂಕರ್, ಸೆಂದಿಲ್ ಕುಮಾರ್, ನವೀನ್ ಕುಮಾರ್, ಶ್ರೀನಿವಾಸ್ ನಾಯಕ್, ಅನನ್ಯ ಕುಮಾರ್, ಪರಿಸರ ಜಾಗೃತಿ ಸಮಿತಿಯ ಸಂಚಾಲಕ ಟಿ.ಜಿ. ಪ್ರೇಮ್ ಕುಮಾರ್, ಜ್ಞಾನಗಂಗಾ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ನಿಂಗಪ್ಪ, ವಲಯ ಅರಣ್ಯಾಧಿಕಾರಿ ರಕ್ಷಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಸ್ಥಳೀಯ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*ಮಗ್ಗುಲ ಶ್ರೀ ಶನೇಶ್ವರ ಮತ್ತು ನವಗ್ರಹ ದೇವಾಲಯದಲ್ಲಿ ಶ್ರಾವಣ ಮಾಸದ ವಿಶೇಷ ಪೂಜೆ*

ಆಗಷ್ಟ್ 12, 2026

*ಕೊಡ್ಲಿಪೇಟೆಯಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ : ಮಕ್ಕಳ ಸಾತ್ವಿಕ ಬದುಕಿಗೆ ವಚನಗಳು ದಾರಿದೀಪ : ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ*

ಆಗಷ್ಟ್ 12, 2026

*ಬೆಟ್ಟಗೇರಿ ಉದಯ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆ*

ಆಗಷ್ಟ್ 12, 2026

*ಕೊಡ್ಲಿಪೇಟೆಯಲ್ಲಿ ಶರಣ ಸಾಹಿತ್ಯ ಕಾರ್ಯಕ್ರಮಕ್ಕೆ ಚಾಲನೆ : ಮಕ್ಕಳ ಸಾತ್ವಿಕ ಬದುಕಿಗೆ ವಚನಗಳು ದಾರಿದೀಪ : ಅಭಿನವಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಮತ*

ಆಗಷ್ಟ್ 12, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಕೊಡ್ಲಿಪೇಟೆ ಆ.12 NEWS DESK : ಇಂದಿನ ವಿದ್ಯಾರ್ಥಿಗಳನ್ನು ಸಾತ್ವಿಕರಾಗಿ ಹಾಗೂ ಸಂಸ್ಕಾರವಂತರಾಗಿ ಬೆಳೆಸಬೇಕಾದ ತುರ್ತು ಅಗತ್ಯ ಇದೆ. ಸಾತ್ವಿಕ…

*ಬೆಟ್ಟಗೇರಿ ಉದಯ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಪೋಷಕರ ಸಭೆ*

ಆಗಷ್ಟ್ 12, 2026

*ಓದುವ ಹವ್ಯಾಸದೊಂದಿಗೆ ಜ್ಞಾನ ವೃದ್ಧಿಸುವಲ್ಲಿ ಗ್ರಂಥಾಲಯದ ಪಾತ್ರ ಅಪಾರ : ಡಾ. ಕೆ.ಜಿ.ವೀಣಾ*

ಆಗಷ್ಟ್ 12, 2026

*ವಿದ್ಯುತ್ ಗ್ರಾಹಕರ ಕುಂದುಕೊರತೆ ನಿವಾರಣಾ ವೇದಿಕೆಗೆ ಸದಸ್ಯರ ನೇಮಕ*

ಆಗಷ್ಟ್ 12, 2026

*ಮಾದರಿ ಅಂಗನವಾಡಿ ರೂಪಿಸುವಲ್ಲಿ ಬಾಲ ವಿಕಾಸ ಸಮಿತಿ ಹೊಣೆಗಾರಿಕೆ: ಸವಿತಾ ಕೀರ್ತನ್*

ಆಗಷ್ಟ್ 12, 2026

*ಮಡಿಕೇರಿ : ಅಂಗನವಾಡಿಯಲ್ಲಿ ಆರೋಗ್ಯ ತಪಾಸಣೆ*

ಆಗಷ್ಟ್ 12, 2026

*ಮಡಿಕೇರಿ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ*

ಆಗಷ್ಟ್ 12, 2026

*ತಲಕಾವೇರಿಗೆ ಮಾಜಿ ಸಚಿವ ಎಸ್.ಸುರೇಶ್‌ ಕುಮಾರ್‌ ಭೇಟಿ : ವಿಶೇಷ ಪೂಜೆ ಸಲ್ಲಿಕೆ*

ಆಗಷ್ಟ್ 12, 2026

*ಆನೆ-ಮಾನವ ಸಂಘರ್ಷಕ್ಕೆ ಅರಿವೇ ಶಾಶ್ವತ ಪರಿಹಾರ: ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ*

ಆಗಷ್ಟ್ 12, 2026

*ಭಾಗಮಂಡಲದಲ್ಲಿ ಶ್ರದ್ಧಾಭಕ್ತಿಯಿಂದ ನಡೆದ “ಪೊಲಿಂಕಾನ ಉತ್ಸವ”*

ಆಗಷ್ಟ್ 12, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.

Ad Blocker Enabled!
Ad Blocker Enabled!
Our website is made possible by displaying online advertisements to our visitors. Please support us by disabling your Ad Blocker.