ಸುಂಟಿಕೊಪ್ಪ ಪೊಲೀಸ್ ಠಾಣೆ ಪ್ರಕಟಣೆ
ಅಪರಿಚಿತ ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ
ದಿನಾಂಕ 09-08-2026 ರಂದು ಬೆಳಿಗ್ಗೆ 11.30 ಗಂಟೆಗೆ ಒಬ್ಬ ಅಪರಿಚಿತ ವೃದ್ಧ ವ್ಯಕ್ತಿಯು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಂತರ ದಿನಾಂಕ 15-08-2026 ರಂದು ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 03.49 ಗಂಟೆಗೆ ಮೃತಪಟ್ಟಿರುತ್ತಾರೆ.
ಈ ಸಂಬಂಧ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್. ಸಂಖ್ಯೆ 14/2026, ಕಲಂ 194 ಬಿ.ಎನ್.ಎಸ್. ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮೃತ ವ್ಯಕ್ತಿಯ ಚಹರೆ:
1. ಹೆಸರು: ಮಂಜುನಾಥ
2. ವಯಸ್ಸು: ಅಂದಾಜು 90 ವರ್ಷ
3. ಎತ್ತರ: 5 ಅಡಿ 7 ಇಂಚು
4. ಚಹರೆ: ಕೋಲು ಮುಖ, ತೆಳ್ಳನೆಯ ಮೈಕಟ್ಟು
5. ಮೈಬಣ್ಣ: ಎಣ್ಣೆಗೆಂಪು; ಕಪ್ಪು-ಬಿಳಿ ತಲೆಕೂದಲು ಹಾಗೂ ಬಿಳಿ ದಾಡಿ
ಮೇಲ್ಕಂಡ ಮೃತ ವ್ಯಕ್ತಿಯ ಬಗ್ಗೆ ಮಾಹಿತಿ ಇರುವವರು ಅಥವಾ ಅವರ ವಾರಸುದಾರರು/ಸಂಬಂಧಿಕರು ಸುಂಟಿಕೊಪ್ಪ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಸಂಪರ್ಕಕ್ಕಾಗಿ:
📞 ಸುಂಟಿಕೊಪ್ಪ ಪೊಲೀಸ್ ಠಾಣೆ: 9480804953
9449335033
– ಸುಂಟಿಕೊಪ್ಪ ಪೊಲೀಸ್
ಠಾಣೆ
ಕೊಡಗು ಜಿಲ್ಲಾ ಪೊಲೀಸ್







