
ಮಡಿಕೇರಿ ಆ.19 NEWS DESK : ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆ 21 ರಂದು ವಿಶ್ವನಾಗರಿಕರ ದಿನದ ಅಂಗವಾಗಿ ಜಿಲ್ಲೆಯ 25 ಶಾಲೆಗಳಲ್ಲಿ ಹಿರಿಯ ನಾಗರಿಕರಿಗೆ ಗೌರವ ಸನ್ಮಾನದ ಮೂಲಕ ವಿಭಿನ್ನವಾಗಿ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತಿದೆ ಎಂದು ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಪಿ.ಆರ್ ಮತ್ತು ಕಾಯ೯ಕ್ರಮ ಸಂಚಾಲಕ ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ. ರೋಟರಿ ಜಿಲ್ಲೆ 3181 ನ ಗವನ೯ರ್ ಸತೀಶ್ ಬೊಳಾರ್ ಮಾಗ೯ದಶ೯ನದಲ್ಲಿ ಈ ವಷ೯ ರೋಟರಿ ಸಂಸ್ಥೆಗಳು ವಿಭಿನ್ನವಾಗಿ ಹಿರಿಯ ನಾಗರಿಕರ ದಿನವನ್ನು ಆಚರಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮಿಸ್ಟಿ ಹಿಲ್ಸ್ ವತಿಯಿಂದ 25 ಶಾಲೆಗಳಲ್ಲಿ ಕಾಯ೯ಕ್ರಮ ಆಯೋಜಿಸಿ ಆ ಶಾಲಾ ವ್ಯಾಪ್ತಿಯ ಆಯ್ದ ಹಿರಿಯರನ್ನು ಗೌರವಿಸಲಾಗುತ್ತಿದೆ ಎಂದು ರಾಜೇಶ್ ಮಾಹಿತಿ ನೀಡಿದರು. ರೋಟರಿ ಮಿಸ್ಟಿ ಹಿಲ್ಸ್ 13 ವಷ೯ಗಳಿಂದ ಮಡಿಕೇರಿ ದಸರಾದಲ್ಲಿ ಮಕ್ಕಳ ದಸರಾ ಆಯೋಜಿಸುತ್ತಾ ಬಂದಿದ್ದು 3 ವಷ೯ಗಳಿಂದ ಕಾಗಿ೯ಲ್ ವಿಜಯದಿವಸ್ ಸಮಾರಂಭವನ್ನು ಸಾವ೯ಜನಿಕರನ್ನು ಒಗ್ಗೂಡಿಸಿ ಆಚರಿಸುತ್ತಿದೆ. ಸೈನಿಕಶಾಲೆಗೆ ಸೇಪ೯ಡೆಯಾಗುವ ವಿದ್ಯಾಥಿ೯ಗಳಿಗೆ ತರಬೇತಿ ಶಿಬಿರವನ್ನೂ 2 ವಷ೯ಗಳಿಂದ ಯಶಸ್ವಿಯಾಗಿ ಆಯೋಜಿಸುತ್ತಿದೆ. ಈ ವಷ೯ ಹಿರಿಯರ ಮಹತ್ವ ತಿಳಿಸುವ ನಿಟ್ಟಿನಲ್ಲಿ ಹಿರಿಯ ನಾಗರಿಕರ ದಿನವನ್ನು 25 ಶಾಲೆಗಳಲ್ಲಿ ಆ.21 ರಂದು ಶುಕ್ರವಾರ ವಿವಿಧ ಸಮಯದಲ್ಲಿ ಆಯೋಜಿಸಲಾಗುತ್ತಿದ್ದು, ಮಕ್ಕಳಿಗೆ ಮನೆ ಮತ್ತು ಸಮಾಜದಲ್ಲಿ ಹಿರಿಯರ ಮಹತ್ವ ತಿಳಿಸುವ ಅಥ೯ಪೂಣ೯ ಕಾಯ೯ಕ್ರಮ ಇದಾಗಲಿದೆ ಎಂದು ಕಾಯ೯ಕ್ರಮ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ. ವಿವಿದೆಡೆಯ ಕಾಯ೯ಕ್ರಮಗಳಲ್ಲಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ ಸೇರಿದಂತೆ ಆಯಾ ಶಾಲಾ ವ್ಯಾಪ್ತಿಯ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕರು, ಸದಸ್ಯರು ಪಾಲ್ಗೊಳ್ಳಲಿದ್ದಾರೆ. :: ಹಿರಿಯರಿಗೆ ನಮನ ಕಾಯ೯ಕ್ರಮ ಆಯೋಜಿಸಲ್ಪಟ್ಟಿರುವ ಶಾಲೆಗಳು :: ಜನರಲ್ ತಿಮ್ಮ ಯ್ಯ ಪಬ್ಲಿಕ್ ಶಾಲೆ ಮಡಿಕೇರಿ, ಸರಕಾರಿ ಜೂನಿಯರ್ ಕಾಲೇಜು ಮಡಿಕೇರಿ, ಎ.ಎಲ್.ಜಿ ಕ್ರೆಸೆಂಟ್ ಶಾಲೆ ಮಡಿಕೇರಿ, ಬ್ಲಾಸಂ ಶಾಲೆ ಮಡಿಕೇರಿ,ಎ.ವಿ ಶಾಲೆ ಮಡಿಕೇರಿ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಗದಾಳು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಪಟ್ಟು , ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಪಾರಾಣೆ, . ಕರ್ನಾಟಕ ಪಬ್ಲಿಕ್ ಶಾಲೆ ನಾಪೋಕ್ಲು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೆಟ್ಟಗೇರಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರಗೋಡು ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಕಟ್ಟೆಮಾಡು, ಸರಕಾರಿ ಪ್ರೌಢ ಶಾಲೆ ಹಾಕತ್ತೂರು , ಜ್ಞಾನ ಗಂಗಾ ವಸತಿ ಶಾಲೆ ಅತ್ತೂರು , ಸರಕಾರಿ ಪ್ರೌಢ ಶಾಲೆ ಚೆಟ್ಟಳ್ಳಿ , ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರೆಕಾಡು .ಎಸ್.ಎಂ.ಎಸ್ ವಿದ್ಯಾ ಪೀಠ ಅರಮೇರಿ, ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ನಾಪೋಕ್ಲು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಗ್ಗೋಡ್ಲು, ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ನಾಪೋಕ್ಲು, ಮದೆ ಮಹೇಶ್ವರ ಎಜುಕೇಶನ್ ಸೊಸೈಟಿ ಮದೆನಾಡು , ಶ್ರೀಮತಿ ಡಿ.ಚೆನ್ನಮ್ಮ ಪ.ಪೂ. ಕಾಲೇಜು ಮಾದಾಪುರ ,ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂಟಿಕೊಪ್ಪ, ಸರಕಾರಿ ಪ್ರೌಢ ಶಾಲೆ ಗಾಳಿಬೀಡು , ಸಕಾ೯ರಿ ಪ್ರೌಢ ಶಾಲೆ ಮಕ್ಕಂದೂರು ,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಕೇರಿ.









