ಮಡಿಕೇರಿ ಆ.21- ಮಕ್ಕಂದೂರಿನ ಸಕಾ೯ರಿ ಪ್ರೌಡಶಾಲೆಯಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ “ ಹಿರಿಯ” ಜೀವಿಗಳಿಗೆ ಗೌರವಾಪ೯ಣೆಯ ವಿನೂತನ ಕಾಯ೯ಕ್ರಮ ಆಯೋಜಿತವಾಗಿತ್ತು.
ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಕಾಯ೯ಕ್ರಮದಲ್ಲಿ ಪಾಲ್ಗೊಂಡು ಹಿರಿಯರಿಗೆ ಗೌರವ ಸಲ್ಲಿಸುವ ಇಂಥ ಕಾಯ೯ಕ್ರಮ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕಾಯ೯ಕ್ರಮದಲ್ಲಿ ಶಾಂತೆಯಂಡ ಅಪ್ಪಣ್ಣ, ಎಲ್. ಮುತ್ತವ್ವ, ಶಾರದಾ ಪ್ರಭಾಕರ್ ಆಚಾಯ೯, ವೆಂಕಮ್ಮ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಬಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಸ್ವಾಗತಿಸಿ, ಮಿಸ್ಟಿ ಹಿಲ್ಸ್ ಸ್ತಾಪಕಾಧ್ಯಕ್ಷ ಬಿ.ಜಿ. ಆನಂತ ಶಯನ ಬಿ.ಜಿ. , ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಡಾ.ಚೇತನ್ ಜಿ.ಡಿ. ನಿದೇ೯ಶಕರಾದ ಲಿಂಗರಾಜು ರವೀಂದ್ರರೈ, ಪ್ರಕಾಶ್ ಪೂವಯ್ಯ, , , ದಿವ್ಯಚೇತನ್, ಸುಮನಾ ಶ್ರೀಹರಿ, ಪಾಲ್ಗೊಂಡಿದ್ದರು.
ಶಾಲಾ ಶಿಕ್ಷಕಿ ಲೀಲಾವತಿ ವಂದಿಸಿದ, ರತಿಕುಮಾರಿ ನಿರೂಪಿಸಿದರು.







