ಮಡಿಕೇರಿ, NEWS DESK ಆ.22- ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಹಾಕತ್ತೂರುವಿನ ಸರ್ಕಾರಿ ಪ್ರೌಡಶಾಲೆಯಲ್ಲಿ ವಿಶ್ವಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಗ್ರಾಮದ ಹಿರಿಯ ನಾಗರಿಕರಾದ ಪೊಡನೊಳನ ಈಶ್ವರ , ಕನ್ನಚಂಡ ಎಂ. ಕಾರ್ಯಪ್ಪ , ದಂಬೆಕೋಡಿ ಭೀಮಯ್ಯ ದೇವಣೀರ ಮುತ್ತಪ್ಪ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.

ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಸಹಾಯಕ ಗವನ೯ರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ಸಮಾಜದಲ್ಲಿ , ಹಿರಿಯರ ಮಹತ್ವದ ಬಗ್ಗೆ ಹಲವು ನಿದರ್ಶನಗಳ ಮೂಲಕ ವಿವರಿಸಿದರು. . ಮಿಸ್ಟಿ ಹಿಲ್ಸ್ ಸದಸ್ಯ ಸ್ನೇಹಿತ್ ನಿವ೯ಹಿಸಿದರು. ಶಾಲಾ ಪ್ರಭಾರ ಮುಖ್ಯೋಪಾಧ್ಯಾಯರು ಶಮಿ೯ಳಾ , ಶಿಕ್ಷಕರು ಹಾಜರಿದ್ದರು.







