ಮಡಿಕೇರಿ, NEWS DESK ಆ. 22- ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅರೆಕಾಡು ಸರ್ಕಾರಿ ಪ್ರೌಡಶಾಲೆಯಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು.
ಗ್ರಾಮದ ಹಿರಿಯ ನಾಗರಿಕರಾದ ಕಮಾಂಡರ್ ಕುಕ್ಕೇರ ಉತ್ತಪ್ಪ, ವೆಂಕಟಯ್ಯ ಹೆಚ್ ಟಿ, ಹಂಸ ಪಿ ಆರ್ ಅವರನ್ನು ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಲಾಯಿತು.

ಶಾಲಾಭಿವೖದ್ದಿ ಸಮಿತಿ ಅಧ್ಯಕ್ಷ ಕೆ. ಎಂ. ಹಸನ್, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿಿ ಪದ್ಮಾವತಿ ಪಿ ಎಂ, ಶಿಕ್ಷಕ ವರ್ಗದವರು ಹಾಜರಿದ್ದರು. ರೋಟರಿ ಮಿಸ್ಟಿ ಹಿಲ್ಸ್ ನ ಮಾಜಿ ಸಹಾಯಕ ಗವನ೯ರ್ ದೇವಣಿರ ತಿಲಕ್ ಪೊನ್ನಪ್ಪ ಮಾತನಾಡಿ, ಹಿರಿಯರನ್ನು ವಿದ್ಯಾಥಿ೯ಗಳು ಗೌರವ ಬಾವನೆಯಿಂದ ಕಾಣಬೇಕೆಂದು ಕರೆ ನೀಡಿದರು.
ಮಿಸ್ಟಿ ಹಿಲ್ಸ್ ನಿದೇ೯ಶಕರಾದ ಸ್ನೇಹಿತ್, ಕಟ್ಟೆಮನೆ ಸೋನಾಜಿತ್, ಲವಿನ್ ಹಾಗೂ ಗ್ರಾಮಸ್ಥರಾದ ಕಾಡೆಮಂಡ ವಿನೋದ್ ತಿಮ್ಮಯ್ಯ ಪಾಲ್ಗೊಂಡಿದ್ದರು.







