ಮಡಿಕೇರಿ, NEWS DESK ಆ.24 : ನಾಪೋಕ್ಲುವಿನ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ನಾಪೋಕ್ಲು, ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಹಾಗೂ ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯ ರೋಟರಿ ಇಂಟರಾಕ್ಟ್ ಕ್ಲಬ್ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ನಮನ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ಹಿರಿಯ ನಾಗರಿಕರನ್ನು ಗೌರವಿಸುವುದು ಮತ್ತು ಅವರ ಅನುಭವ, ಮಾರ್ಗದರ್ಶನವನ್ನು ಯುವ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಶ್ರೀರಾಮ ಟ್ರಸ್ಟ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯರಾದ *ಅರೆಯಡ ಕಾಳಯ್ಯ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ ಹಾಗೂ ತೋಲಂಡ ಮೊಣ್ಣಪ್ಪ* ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶ್ರೀರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಪ್ರಾಂಶುಪಾಲರಾದ ಶಾರದಾ ಬಿ.ಎಂ., ರೋಟರಿ ಮಿಸ್ಟಿ ಹಿಲ್ಸ್ ನ ಅಜಿತ್ ಕುಲ್ಲೇಟಿರ, ಶ್ರೀಹರಿ ರಾವ್, ಬೊಳ್ಯಂಡ ಕಾರ್ಯಪ್ಪ, ನವೀನ್ ಬೆಳ್ಳಿಯಪ್ಪ ಹಾಗೂ ಶಾಲಾ ಇಂಟರಾಕ್ಟ್ ಸಂಯೋಜಕಿ ಶೋಭಾ ಕೆ.ಎಸ್ ಉಪಸ್ಥಿತರಿದ್ದರು.
ಶಾಲಾ ಇಂಟರಾಕ್ಟ್ ನ ಶಮಿಕ ಬಿ.ಎನ್., ಗಾನ ಗಂಗಮ್ಮ ಹಾಗೂ ಜಯಲಕ್ಷ್ಮಿ ಪ್ರಾರ್ಥಿಸಿ, ಅಸ್ನ ಟಿ.ಎ. ಸ್ವಾಗತಿಸಿ, ಸೋನಾಲ್ ಕೆ.ವಿ. ವಂದಿಸಿದರು. ಆಯಿಷತ್ ಹನ್ನ, ನಜಾ ಆಯಿಷ ಹಾಗೂ ಬೋಜಮ್ಮ ಅತಿಥಿಗಳ ಪರಿಚಯ ಮಾಡಿದರು. ಫಾತಿಮತ್ ರಹಮ ಹಾಗೂ ಆಯಿಷತ್ ರಿಧಾ ನಿರೂಪಿಸಿದರು.
ವಿದ್ಯಾರ್ಥಿಗಳಾದ ಧನ್ವಿನ್ ಸಾತ್ವಿಕ್ ಹಾಗೂ ಫಾತಿಮಾ ನಿಶಾ ಹಿರಿಯ ನಾಗರಿಕರ ಮಹತ್ವದ ಕುರಿತು ಮಾತನಾಡಿದರು.







