
ಮಡಿಕೇರಿ ಆ.27 NEWS DESK : ಜಾನಪದ ಕಲಾವಿದರು, ವಿದ್ವಾಂಸರು, ವಾದ್ಯಗಾರರು, ಬುಡಕಟ್ಟು ಜನರನ್ನೊಳಗೊಂಡಂತೆ ‘ಜಾನಪದ ಸಂಗಮ’ ಹೆಸರಿನ ಕಾರ್ಯಕ್ರಮವನ್ನು ಗಿರಿಜನ ಉಪಯೋಜನೆಯಡಿ ಸರ್ಕಾರವು ಹೊಸ ಯೋಜನೆಯಾಗಿ ಘೋಷಿಸಿದೆ. ಗಿರಿಜನ ಉಪಯೋಜನೆಯಡಿ ರಾಜ್ಯದ 4 ವಿಭಾಗಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜಾನಪದ ಕಲಾಪ್ರಕಾರದ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ 16 ರಿಂದ 40 ವರ್ಷದೊಳಗಿನ ವಯೋಮಾನದ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಅಕಾಡೆಮಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002 ಇವರಿಗೆ ಸೆಪ್ಟೆಂಬರ್, 16 ರೊಳಗೆ ತಲುಪಿಸಲು ಕೋರಿದೆ.
ಅರ್ಜಿ ನಮೂನೆಯು ಅಕಾಡೆಮಿ ವೆಬ್‍ಸೈಟ್ ವಿಳಾಸ https://janapada.karnataka.gov.in/ ಇಲ್ಲಿ ಪಡೆದುಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಅಕಾಡೆಮಿ ಇ-ಮೇಲ್ registrar.janapada@gmail.com ಹಾಗೂ ದೂ.ಸಂ.080-22215509 ನ್ನು ಸಂಪರ್ಕಿಸಬಹುದು. ಶಿಬಿರಾರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.








