
ಮಡಿಕೇರಿ, ಆ.27 NEWS DESK : ರಕ್ಷಾಬಂಧನದ ಪ್ರಯುಕ್ತ ಬ್ರಹ್ಮಕುಮಾರಿಸ್ ಮಡಿಕೇರಿ ಶಾಖೆಯ ವತಿಯಿಂದ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ರಾಖಿ ಕಟ್ಟುವ ಮೂಲಕ ರಕ್ಷಾಬಂಧನ ಆಚರಿಸಲಾಯಿತು. ಬ್ರಹ್ಮಕುಮಾರಿ ಧನಲಕ್ಷ್ಮಿ ಅಕ್ಕನವರು ಸಂಸದ ಯದುವೀರ್ ಒಡೆಯರ್ ಅವರಿಗೆ ರಾಖಿ ಕಟ್ಟಿ, ತಿಲಕವಿಟ್ಟು ರಕ್ಷಾಬಂಧನದ ಶುಭಾಶಯಗಳನ್ನು ಕೋರಿದರು. ಸಹೋದರ-ಸಹೋದರಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ಪರಸ್ಪರ ರಕ್ಷಣೆಯ ಸಂಕೇತವಾಗಿರುವ ರಕ್ಷಾಬಂಧನದ ಮಹತ್ವವನ್ನು ಈ ಸಂದರ್ಭದಲ್ಲಿ ತಿಳಿಸಲಾಯಿತು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಅಪ್ಪಚ್ಚು ರಂಜನ್, ಸುಜಾ ಕುಶಾಲಪ್ಪ ಸೇರಿದಂತೆ ಪಕ್ಷದ ಹಲವು ನಾಯಕರು, ಕಾರ್ಯಕರ್ತರು ಹಾಗೂ ಇತರ ಸಹೋದರ-ಸಹೋದರಿಯರಿಗೂ ಬ್ರಹ್ಮಕುಮಾರಿಸ್ ಮಡಿಕೇರಿ ಶಾಖೆಯ ವತಿಯಿಂದ ರಾಖಿ ಕಟ್ಟಿ ರಕ್ಷಾಬಂಧನದ ಶುಭಾಶಯಗಳನ್ನು ಸಲ್ಲಿಸಲಾಯಿತು. ಈ ವೇಳೆ ಬ್ರಹ್ಮಕುಮಾರಿಸ್ ಮಡಿಕೇರಿ ಶಾಖೆಯ ವತಿಯಿಂದ ಸಂಸದರು ಸೇರಿದಂತೆ ಗಣ್ಯರನ್ನು ಶಾಖೆಗೆ ಭೇಟಿ ನೀಡುವಂತೆ ಆಹ್ವಾನಿಸಲಾಯಿತು. ರಕ್ಷಾಬಂಧನದ ಮೂಲಕ ಸಮಾಜದಲ್ಲಿ ಸಹೋದರತ್ವ, ಸೌಹಾರ್ದತೆ, ಪ್ರೀತಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಸಂದೇಶವನ್ನು ಸಾರಲಾಯಿತು.









