ಅಮ್ಮತ್ತಿ, NEWS DESK ಸೆ.03: ಅಮ್ಮತ್ತಿ ಒಂಟಿ ಅಂಗಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಥ್ರೋಬಾಲ್ ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯ ಪ್ರಾಥಮಿಕ ವಿಭಾಗದ ಬಾಲಕರ ತಂಡವು ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದೆ.
ಪಂದ್ಯಾವಳಿಯಲ್ಲಿ ಕಾವೇರಿ ಶಾಲೆಯನ್ನು ಪ್ರತಿನಿಧಿಸಿದ ಸಣ್ಣುವಂಡ ವಚನ್, ಪ್ರೀತಮ್, ಶಿಬಿಲ್ ಪಿ.ಆರ್., ಮೊಹಮ್ಮದ್ ರಾಹೀಲ್, ಕನೀಶ್ ಪುಟ್ಟಪ್ಪ, ನಲ್ಲೆರ ನಿಶ್ಚಿತ್, ಐಚಂಡ ವಂಶಿಕ್ ಕುಟ್ಟಪ್ಪ, ಪಾಲೇಂಗಡ ವಿಹಾನ್ ಪೂವಣ್ಣ, ಮೊಹಮ್ಮದ್ ಶಾಝಿಲ್, ಕೊಟ್ಟೆಚಿರ ಶಿವಾನ್ ಎನ್., ಚಿರಾಗ್ ಪಿ.ಆರ್., ಪಾಲೇಚಂಡ ಪ್ರಧಾನ ಅಪ್ಪಚ್ಚು ಹಾಗೂ ಬೈಮನ ಚೇತನ್ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣರಾದರು.
ತಂಡಕ್ಕೆ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀಮತಿ ಮೋನಿಕಾ ಹಾಗೂ ಶ್ರೀಮತಿ ಲಾವಣ್ಯ ಅವರು ತರಬೇತಿ ನೀಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಸುಧೇಶ್ ಬಿ.ಎಸ್., ಕಾರ್ಯದರ್ಶಿ ಶ್ರೀ ವಿನೋದ್ ಪಿ.ಎನ್., ಮುಖ್ಯ ಶಿಕ್ಷಕಿ ಶ್ರೀಮತಿ ಪಾರ್ವತಿ ಪಿ.ಯು., ಸಂಯೋಜಕರಾದ ಅಮೃತ್ ಅರ್ಜುನ್ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಲೂಕು ಮಟ್ಟದ ಮುಂದಿನ ಪಂದ್ಯಾವಳಿಗೆ ತಂಡಕ್ಕೆ ಶುಭ ಹಾರೈಸಿದ್ದಾರೆ.









