Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
Breaking News
  • *NCC ಫೈರಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್; ಜೇಷ್ಠ ಸುಬ್ಬಯ್ಯಗೆ ಹಾರ್ದಿಕ ಅಭಿನಂದನೆ*
  • *ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ; ಶೋಭಾ ಯಾತ್ರೆಗೆ ಮೆರುಗು ತಂದ ಕುಣಿತ ಭಜನೆ ತಂಡ*
  • *ಮಲ್ಲಳ್ಳಿ ಜಲಪಾತದಲ್ಲಿ SIR-2026 ಕುರಿತು ಜಾಗೃತಿ ಜಾಥಾ*
  • *ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗಾಡ್ರೆಜ್ ಹಾಗೂ ಟ್ರ್ಯಾಕ್ ಶೂಟ್ ವಿತರಣೆ*
  • *ಸೋಮವಾರಪೇಟೆಯಲ್ಲಿ ತಾಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಮಹಾಸಭೆ*
  • *ರೋಟರಿ ಮಿಸ್ಟಿ ಹಿಲ್ಸ್‌ನಿಂದ ನಾಲ್ವರು ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ; ನವತಂತ್ರಜ್ಞಾನಗಳ ಕಾಲಘಟ್ಟದಲ್ಲಿ ಪಾಠ ಹೇಳುವುದೇ ಶಿಕ್ಷಕರಿಗೆ ದೊಡ್ಡ ಸವಾಲು: ಸುಜಾತ ತಳವಾರ್*
  • *ಪರಿಸರ ಸಂರಕ್ಷಣೆ ಸಂದೇಶ ಸಾರಿದ ರೋಟರಿ ವುಡ್ಸ್ ಬೈಕ್ ಜಾಥಾ*
  • *ಜನ-ಜಾನುವಾರು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*
  • *ಬಾಲ್ ಬ್ಯಾಡ್ಮಿಂಟನ್‌ : ವಿಭಾಗ ಮಟ್ಟಕ್ಕೆ ಸರ್ವದೈವತ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು*
  • *ಕುಟ್ಟದಲ್ಲಿ ಶಿಕ್ಷಕರ ದಿನಾಚರಣೆ: ವಿದ್ಯಾರ್ಥಿಗಳಿಗೆ ಮೌಲ್ಯ, ಧ್ಯಾನ ಹಾಗೂ ರಾಜಯೋಗದ ಅರಿವು*
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada





Home»ಇತ್ತೀಚಿನ ಸುದ್ದಿಗಳು»*ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ; ಶೋಭಾ ಯಾತ್ರೆಗೆ ಮೆರುಗು ತಂದ ಕುಣಿತ ಭಜನೆ ತಂಡ*
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

*ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ; ಶೋಭಾ ಯಾತ್ರೆಗೆ ಮೆರುಗು ತಂದ ಕುಣಿತ ಭಜನೆ ತಂಡ*

ಸೆಪ್ಟೆಂಬರ್ 20, 20262 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link

ವಿರಾಜಪೇಟೆ, NEWS DESK ಸೆ.20: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವವು ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಏಳು ದಿನಗಳ ಕಾಲ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿತ್ತು. ವಿಸರ್ಜನೋತ್ಸವದಂದು ಬೆಳಗ್ಗಿನಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ವಿಶೇಷ ಪೂಜೆ ಹಾಗೂ ಗಣಪತಿ ಪೂಜೆಯನ್ನು ಸಲ್ಲಿಸಿದರು.

ದೇವಸ್ಥಾನದ ಒಳ ಆವರಣದಲ್ಲಿರುವ ಶ್ರೀ ಮಹಾಗಣಪತಿ ಸ್ವಾಮಿ, ಶ್ರೀ ಅಯ್ಯಪ್ಪ ಸ್ವಾಮಿ, ಶ್ರೀ ವನದುರ್ಗ ಹಾಗೂ ಶ್ರೀ ನಾಗದೇವರಿಗೆ ಅರ್ಚಕರು ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದರು. ವಿವಿಧ ಧಾರ್ಮಿಕ ಸೇವೆಗಳ ಬಳಿಕ ಶ್ರೀ ಮಹಾಗಣಪತಿ ಸ್ವಾಮಿ ಹಾಗೂ ಗೌರಿ ದೇವರಿಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಮಧ್ಯಾಹ್ನದ ಬಳಿಕ ವಿದ್ಯುತ್ ಹಾಗೂ ಹೂವಿನ ಅಲಂಕೃತ ತೇರಿನ ಮಂಟಪದಲ್ಲಿ ಶ್ರೀ ಗಣಪತಿ ಹಾಗೂ ಗೌರಿ ದೇವರುಗಳನ್ನು ಪೂಜಿಸಿ ಪ್ರತಿಷ್ಠಾಪಿಸಲಾಯಿತು. ದೇವಸ್ಥಾನದ ಎದುರಿನಿಂದ ಆರಂಭವಾದ ಶೋಭಾಯಾತ್ರೆಯು ಬೇಟೋಳಿ ಮೂಲೆ ಅಂಗಡಿಯ ಹೊಳೆಯವರೆಗೆ ಸಾಗಿತು. ಬಳಿಕ ಅರ್ಚಕರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದ ನಂತರ ಶ್ರೀ ಗಣಪತಿ ಹಾಗೂ ಗೌರಿ ದೇವರುಗಳ ಮೂರ್ತಿಗಳನ್ನು ಮೂಲೆ ಅಂಗಡಿ ಹೊಳೆಯಲ್ಲಿ ವಿಸರ್ಜಿಸಲಾಯಿತು.

ಶೋಭಾಯಾತ್ರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಕುಣಿತ ಭಜನೆ ತಂಡ ಹಾಗೂ ಸಮೀಪದ ರಾಮನಗರದ ಮಕ್ಕಳ ಕುಣಿತ ಭಜನೆ ತಂಡವು ವಿಶೇಷ ಮೆರುಗು ನೀಡಿತು. ದಾರಿಯುದ್ದಕ್ಕೂ ದೇವರ ಹಾಡುಗಳಿಗೆ ನೃತ್ಯ ಮಾಡುತ್ತಾ ತಂಡಗಳು ಶೋಭಾಯಾತ್ರೆಯಲ್ಲಿ ಸಾಗಿದವು. ರುದ್ರಂ ಚಂಡೆ ಬಳಗದಿಂದ ಚಂಡೆ ಸೇವೆ, ದೇವಸ್ಥಾನದ ಮಹಿಳಾ ಭಜನಾ ಮಂಡಳಿಯಿಂದ ಭಜನೆ ಸೇವೆ, ಬೊಂಬೆ ಕುಣಿತ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ವಿಸರ್ಜನೋತ್ಸವದ ಬಳಿಕ ದೇವಸ್ಥಾನಕ್ಕೆ ಮರಳಿದ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ಧಾರ್ಮಿಕ ಕಾರ್ಯಕ್ರಮಗಳನ್ನು ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಹಾಗೂ ವಾಮನಮೂರ್ತಿ ಭಟ್ ನೆರವೇರಿಸಿದರು.

ಶೋಭಾಯಾತ್ರೆಯುದ್ದಕ್ಕೂ ಬೇಟೋಳಿ ಗ್ರಾಮ, ಸುತ್ತಮುತ್ತಲಿನ ಗ್ರಾಮಗಳು ಹಾಗೂ ವಿರಾಜಪೇಟೆ ನಗರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸಂತೋಷ್ ಬಿ.ಪಿ., ಉಪಾಧ್ಯಕ್ಷರಾದ ನಂದ ಬಿ.ಜಿ., ಶೈಲೇಶ್ ಬಿ.ಎಂ., ಕಾರ್ಯದರ್ಶಿ ಬಿ.ಎನ್. ಶಾಂತಿಭೂಷಣ್, ಖಜಾಂಚಿ ಜ್ಯೋತಿ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Follow us Follow us
Share. WhatsApp Facebook Twitter Email Telegram Copy Link

Website design development company services in Mangalore

Forex Trading Teacher in India

Related Posts

*NCC ಫೈರಿಂಗ್ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್‌ಶಿಪ್; ಜೇಷ್ಠ ಸುಬ್ಬಯ್ಯಗೆ ಹಾರ್ದಿಕ ಅಭಿನಂದನೆ*

ಸೆಪ್ಟೆಂಬರ್ 20, 2026

*ಮಲ್ಲಳ್ಳಿ ಜಲಪಾತದಲ್ಲಿ SIR-2026 ಕುರಿತು ಜಾಗೃತಿ ಜಾಥಾ*

ಸೆಪ್ಟೆಂಬರ್ 20, 2026

*ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗಾಡ್ರೆಜ್ ಹಾಗೂ ಟ್ರ್ಯಾಕ್ ಶೂಟ್ ವಿತರಣೆ*

ಸೆಪ್ಟೆಂಬರ್ 20, 2026

*ಬೇಟೋಳಿ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಗೌರಿ ಗಣೇಶ ಮೂರ್ತಿಗಳ ವಿಸರ್ಜನೋತ್ಸವ; ಶೋಭಾ ಯಾತ್ರೆಗೆ ಮೆರುಗು ತಂದ ಕುಣಿತ ಭಜನೆ ತಂಡ*

ಸೆಪ್ಟೆಂಬರ್ 20, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಸೆ.20: ಸಮೀಪದ ಬೇಟೋಳಿ ಗ್ರಾಮದ ರಾಮನಗರದಲ್ಲಿರುವ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 44ನೇ ವರ್ಷದ…

*ಮಲ್ಲಳ್ಳಿ ಜಲಪಾತದಲ್ಲಿ SIR-2026 ಕುರಿತು ಜಾಗೃತಿ ಜಾಥಾ*

ಸೆಪ್ಟೆಂಬರ್ 20, 2026

*ಲಿಟಲ್ ಸ್ಕಾಲರ್ಸ್ ಅಕಾಡೆಮಿ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗಾಡ್ರೆಜ್ ಹಾಗೂ ಟ್ರ್ಯಾಕ್ ಶೂಟ್ ವಿತರಣೆ*

ಸೆಪ್ಟೆಂಬರ್ 20, 2026

*ಸೋಮವಾರಪೇಟೆಯಲ್ಲಿ ತಾಲೂಕು ಮಟ್ಟದ ಸ್ಕೌಟ್ ಮತ್ತು ಗೈಡ್ಸ್ ಮಹಾಸಭೆ*

ಸೆಪ್ಟೆಂಬರ್ 20, 2026

*ರೋಟರಿ ಮಿಸ್ಟಿ ಹಿಲ್ಸ್‌ನಿಂದ ನಾಲ್ವರು ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿ; ನವತಂತ್ರಜ್ಞಾನಗಳ ಕಾಲಘಟ್ಟದಲ್ಲಿ ಪಾಠ ಹೇಳುವುದೇ ಶಿಕ್ಷಕರಿಗೆ ದೊಡ್ಡ ಸವಾಲು: ಸುಜಾತ ತಳವಾರ್*

ಸೆಪ್ಟೆಂಬರ್ 20, 2026

*ಪರಿಸರ ಸಂರಕ್ಷಣೆ ಸಂದೇಶ ಸಾರಿದ ರೋಟರಿ ವುಡ್ಸ್ ಬೈಕ್ ಜಾಥಾ*

ಸೆಪ್ಟೆಂಬರ್ 20, 2026

*ಜನ-ಜಾನುವಾರು ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ ಎಚ್ಚರ ವಹಿಸಿ : ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್*

ಸೆಪ್ಟೆಂಬರ್ 19, 2026

*ಬಾಲ್ ಬ್ಯಾಡ್ಮಿಂಟನ್‌ : ವಿಭಾಗ ಮಟ್ಟಕ್ಕೆ ಸರ್ವದೈವತ ಪ್ರೌಢಶಾಲೆಯ ನಾಲ್ವರು ವಿದ್ಯಾರ್ಥಿಗಳು*

ಸೆಪ್ಟೆಂಬರ್ 19, 2026

*ಕುಟ್ಟದಲ್ಲಿ ಶಿಕ್ಷಕರ ದಿನಾಚರಣೆ: ವಿದ್ಯಾರ್ಥಿಗಳಿಗೆ ಮೌಲ್ಯ, ಧ್ಯಾನ ಹಾಗೂ ರಾಜಯೋಗದ ಅರಿವು*

ಸೆಪ್ಟೆಂಬರ್ 19, 2026

*ಕೊಡಗು ಸಹಕಾರ ಬ್ಯಾಂಕ್‍ಗೆ ರೂ.22.39 ಕೋಟಿ ನಿವ್ವಳ ಲಾಭ : ಶೇ.20 ಡಿವಿಡೆಂಟ್ ಘೋಷಣೆ*

ಸೆಪ್ಟೆಂಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.