ಮಡಿಕೇರಿ, NEWS DESK ನ.1: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ, ಮೈಸೂರು ವತಿಯಿಂದ ನಡೆಸಲಾದ ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಮಡಿಕೇರಿಯ ಮೌನ ವಿ.ಜೆ. ಅತ್ಯುನ್ನತ ಶ್ರೇಣಿ ಗಳಿಸಿ ಸಾಧನೆ ಮಾಡಿದ್ದಾರೆ.
ಇವರು ಮಡಿಕೇರಿಯ ನೃತ್ಯ ಮಂಟಪ ಟ್ರಸ್ಟ್ನ ವಿದುಷಿ ರೂಪಾ ಉಪಾಧ್ಯ ಅವರ ಶಿಷ್ಯೆಯಾಗಿದ್ದಾರೆ. ಮಡಿಕೇರಿಯ ಜಯಲಕ್ಷ್ಮಿ ಮತ್ತು ಜಯಕುಮಾರ್ ದಂಪತಿಗಳ ಪುತ್ರಿಯಾಗಿರುವ ಮೌನ ಅವರ ಸಾಧನೆಗೆ ಕುಟುಂಬಸ್ಥರು, ಗುರುಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

















