ಮಡಿಕೇರಿ NEWS DESK ನ.2 : ಕೊಡಗು ಜಿ.ಪಂ.ನ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಿನೇಶ್ ಕುಮಾರ್ ಮೀನಾ ಅವರು ಸೋಮವಾರ ಅಧಿಕಾರ ಸ್ವೀಕಾರ ಮಾಡಿದರು. ದಿನೇಶ್ ಕುಮಾರ್ ಮೀನಾ ಅವರು ಈ ಹಿಂದೆ ಕೊಳ್ಳೇಗಾಲ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಸರ್ಕಾರದ ಆದೇಶದನ್ವಯ ಈ ಹಿಂದಿನ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆನಂದ್ ಪ್ರಕಾಶ್ ಮೀನಾ ಅವರು ವಿಜಯಪುರ ಜಿಲ್ಲೆಗೆ ವರ್ಗಾವಣೆಯಾಗಿದ್ದರು. ಇದೀಗ ನೂತನ ಸಿ.ಇ.ಒ ಆಗಿ ದಿನೇಶ್ ಕುಮಾರ್ ಮೀನಾ ಅಧಿಕಾರ ವಹಿಸಿಕೊಂಡಿದ್ದಾರೆ.

















