ಸೋಮವಾರಪೇಟೆ, NEWS DESK ನ.21: ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ, ಸೋಮವಾರಪೇಟೆ ಇವರ ವತಿಯಿಂದ ಒ.ಎಲ್.ವಿ. ಕಾನ್ವೆಂಟ್ನಲ್ಲಿ ಆಯೋಜಿಸಲಾಗಿದ್ದ ಸೋಮವಾರಪೇಟೆ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಎಸ್.ಜೆ.ಎಂ. ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ:
-
ನಿಹಾಲ್ ಎಚ್.ಎಸ್. – ಕಥೆ ಹೇಳುವುದು (ಪ್ರಥಮ)
-
ಕೃತಿಕಾ ಡಿ. – ಅಭಿನಯ ಗೀತೆ (ಪ್ರಥಮ)
-
ಮಹಮದ್ ಸುಹೈಲ್ – ಧಾರ್ಮಿಕ ಪಠಣ (ಪ್ರಥಮ)
-
ತನ್ವಿತ – ಕನ್ನಡ ಕಂಠಪಾಠ (ದ್ವಿತೀಯ)
-
ಆಧ್ಯಾ – ಅಭಿನಯ ಗೀತೆ (ದ್ವಿತೀಯ)
-
ಅಶಿನಿ – ಕ್ಲೇ ಮಾಡೆಲಿಂಗ್ (ದ್ವಿತೀಯ)
-
ನಿರಂಜನ್ ಎಸ್. – ಛದ್ಮವೇಷ (ತೃತೀಯ)
-
ದರ್ಶನ್ – ದೇಶಭಕ್ತಿ ಗೀತೆ (ತೃತೀಯ)
-
ಅನ್ವಿತ್ – ಇಂಗ್ಲಿಷ್ ಕಂಠಪಾಠ (ತೃತೀಯ)
ಹಿರಿಯ ಪ್ರಾಥಮಿಕ ವಿಭಾಗದಲ್ಲಿ:
-
ವಿಂಧ್ಯಾ ಶ್ರೀರಾಮ್ – ಕಥೆ ಹೇಳುವುದು (ಪ್ರಥಮ)
-
ದೇವಿಕ ಜಿ.ಡಿ. – ಕನ್ನಡ ಕಂಠಪಾಠ (ಪ್ರಥಮ)
-
ಅಹಲ್ಯಾ ಎಚ್.ಎಸ್. – ಇಂಗ್ಲಿಷ್ ಕಂಠಪಾಠ (ಪ್ರಥಮ)
-
ಯತೀಶ್ ಸಿ. – ಹಿಂದಿ ಕಂಠಪಾಠ (ಪ್ರಥಮ)
-
ಉದ್ಭವ್ ಕೆ. – ಮಿಮಿಕ್ರಿ (ಪ್ರಥಮ)
-
ಮೋಕ್ಷಿತ್ ಹೆಚ್.ಆರ್. – ಅಭಿನಯ ಗೀತೆ (ಪ್ರಥಮ)
-
ವೀಕ್ಷಿತ್ ಜೆ. – ಕ್ಲೇ ಮಾಡೆಲಿಂಗ್ (ದ್ವಿತೀಯ)
-
ಪ್ರಣಮ್ ಎಸ್.ಎಂ. – ದೇಶಭಕ್ತಿ ಗೀತೆ (ದ್ವಿತೀಯ)
-
ಚಂದನ್ – ಆಶುಭಾಷಣ (ದ್ವಿತೀಯ)
-
ಮೋಕ್ಷಿತ್ ಆರ್. – ಭಕ್ತಿ ಗೀತೆ (ತೃತೀಯ)
ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳ ಸಾಧನೆಗೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
















