ಸೋಮವಾರಪೇಟೆ ಜ.4 : ಕಿಬ್ಬೆಟ್ಟ ಗ್ರಾಮದ ಅಯ್ಯಪ್ಪ ಕಾಲೋನಿಯಲ್ಲಿ ಶ್ರೀ ಗಣಪತಿ, ಭಗವತಿ ಹಾಗೂ ಧರ್ಮಶಾಸ್ತ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಥಮ ವರ್ಷದ ವಾರ್ಷಿಕ ಮಹಾಪೂಜೆ ಜ.7 ಮತ್ತು 8ರಂದು ನಡೆಯಲಿದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಪಿ.ಜಗನ್ನಾಥ್ ತಿಳಿಸಿದ್ದಾರೆ.
ಜ.7 ರಂದು ಬೆಳಿಗ್ಗೆ 10 ಗಂಟೆಯಿಂದ ಗ್ರಾಮದಲ್ಲಿ ಚಂಡೆ ವಾದ್ಯದೊಂದಿಗೆ ಉತ್ಸವ ಮೂರ್ತಿಯ ಮೆರವಣಿಗೆ, ಸಂಜೆ 6 ಗಂಟೆಯಿಂದ 1.30ರವರೆಗೆ ಮಹಾ ಭಗವತಿ ಸೇವೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ.
ಜ.8 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆಯವರೆಗೆ ವಿವಿಧ ಪೂಜೆಗಳು, ಸಂಜೆ 4 ಘಂಟೆಗೆ ಅಯ್ಯಪ್ಪ ಆನಂದ ನೃತ್ಯ ನಡೆಯಲಿದೆ. ಕೇರಳದ ತಂತ್ರಿ ವರ್ಯರಾದ ಬ್ರಹ್ಮಶ್ರೀ ಹರಿಕೃಷ್ಣನ್ ನಂಬೂದರಿ ಅವರು ಪೂಜೆಯ ನೇತೃತ್ವವನ್ನು ವಹಿಸಲಿದ್ದಾರೆ.
















