Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»“ನ್ಯೂಸ್ ಡೆಸ್ಕ್” ವರದಿ ಫಲಶ್ರುತಿ : ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ದೊರೆತ ಸೇತುವೆ ಭಾಗ್ಯ : ನೂತನ ಸೇತುವೆ ಉದ್ಘಾಟನೆ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

“ನ್ಯೂಸ್ ಡೆಸ್ಕ್” ವರದಿ ಫಲಶ್ರುತಿ : ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ದೊರೆತ ಸೇತುವೆ ಭಾಗ್ಯ : ನೂತನ ಸೇತುವೆ ಉದ್ಘಾಟನೆ

ಜನವರಿ 29, 20232 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಮಡಿಕೇರಿ ಜ.29 : ಮಡಿಕೇರಿ ತಾಲ್ಲೂಕಿನ ಕುಂದಚೇರಿ ಗ್ರಾ.ಪಂ ವ್ಯಾಪ್ತಿಯ ಕೋಪಟ್ಟಿ ಗ್ರಾಮಸ್ಥರಿಗೆ ಕೊನೆಗೂ ಸೇತುವೆ ಭಾಗ್ಯ ದೊರೆತ್ತಿದೆ. ಕಳೆದ 15 ವರ್ಷಗಳಿಂದ ದೊಡ್ಡ ಹೊಳೆಯನ್ನು ದಾಟಲು ಗ್ರಾಮಸ್ಥರು ಪಡುತ್ತಿದ್ದ ಹರಸಾಹಸದ ಕುರಿತು 2022 ಜೂನ್ ತಿಂಗಳಿನಲ್ಲಿ “ನ್ಯೂಸ್ ಡೆಸ್ಕ್” ವರದಿ ಮಾಡಿತ್ತು. ಇದರ ಫಲಶ್ರುತಿಯಾಗಿ ಲೋಕೋಪಯೋಗಿ ಇಲಾಖೆ ರೂ.35 ಲಕ್ಷ ವೆಚ್ಚದಲ್ಲಿ ಸೇತುವೆಯನ್ನು ನಿರ್ಮಾಣ ಮಾಡಿದೆ. ನೂತನ ಸೇತುವೆಯನ್ನು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು ಇಂದು ಉದ್ಘಾಟಿಸಿದರು.
2021 ರಲ್ಲಿ ತಲಕಾವೇರಿ ಭಾಗದಲ್ಲಿ ಮಹಾಮಳೆಯಿಂದ ಅನಾಹುತ ಸಂಭವಿಸಿದಾಗ ಕೋಪಟ್ಟಿ ಭಾಗದ ದೊಡ್ಡ ಹೊಳೆಯಲ್ಲಿ ಪ್ರವಾಹದ ರೂಪದಲ್ಲಿ ನೀರು ಹರಿದು ಬಂದಿತ್ತು. ಜೀವ ಉಳಿಸಿಕೊಳ್ಳಬೇಕೆಂದರೆ ಅಥವಾ ತುರ್ತು ಚಿಕಿತ್ಸೆಗೆ ತೆರಳಬೇಕೆಂದರೆ ಯಾವುದೇ ಮಾರ್ಗದ ವ್ಯವಸ್ಥೆ ಇಲ್ಲಿರಲಿಲ್ಲ. ಎಲ್ಲಾ ಸಂದರ್ಭದಲ್ಲೂ ಹೊಳೆ ದಾಟುವುದು ಅನಿವಾರ್ಯವಾಗಿತ್ತು. ಇದರಿಂದ ವಯೋವೃದ್ಧರು ಹಾಗೂ ಮಕ್ಕಳು ಕಷ್ಟಪಡುತ್ತಿದ್ದರು.
ಬೆಟ್ಟದಿಂದ ಬರುವ ಎರಡು ಹೊಳೆಗಳು ಸೇರಿ ಹರಿಯುವ ಈ ನೀರಿನಲ್ಲಿ ದಾಟುವುದು ಅಷ್ಟು ಸುಲಭದ ಮಾತಲ್ಲ. ಕಾರಣ ಇದು ಕಲ್ಲಿನಿಂದ ಕೂಡಿದ ಹೊಳೆ, ಸ್ವಲ್ಪ ನಿಯಂತ್ರಣ ತಪ್ಪಿದರೂ ದಾಟುತ್ತಿರುವವರು ನೀರು ಪಾಲಾಗುವುದು ಖಚಿತವಾಗಿತ್ತು. ಅತ್ಯಂತ ಅಪಾಯಕಾರಿ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಗ್ರಾಮಸ್ಥರು ಶಾಶ್ವತ ಸೇತುವೆಗಾಗಿ ಹಲವು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ.
2022 ರಲ್ಲಿಯೂ ಮಹಾಮಳೆಯಿಂದ ಸಂಕಷ್ಟ ಎದುರಾಗಬಹುದೆನ್ನುವ ಆತಂಕದಲ್ಲಿ ಕೋಪಟ್ಟಿಯ ಸೋಮೆಟ್ಟಿ, ದಾಯನ ಹಾಗೂ ಪೊಡನೋಲನ ಕುಟುಂಬಸ್ಥರು ಸುರಿಯುವ ಗಾಳಿಮಳೆಯ ನಡುವೆಯೇ ಹೊಳೆಗೆ ಕಾಲು ಸೇತುವೆಯನ್ನು ನಿರ್ಮಿಸಿದರು. ಗ್ರಾಮಸ್ಥರ ಸಹಕಾರದೊಂದಿಗೆ ಬಿದಿರು ಮತ್ತು ಮರದ ತುಂಡುಗಳನ್ನು ಬಳಸಿ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸುತ್ತಿದ್ದಾಗ “ನ್ಯೂಸ್ ಡೆಸ್ಕ್” ಈ ಕುರಿತು ವರದಿ ಮಾಡಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿತ್ತು.
ಗ್ರಾಮಸ್ಥರ ಸಂಕಷ್ಟದ ಸಂಪರ್ಕ ವ್ಯವಸ್ಥೆ ಕುರಿತು ವರದಿ ಮಾಡಿದ ಏಳು ತಿಂಗಳಿನಲ್ಲೇ ನೂತನ ಸೇತುವೆ ನಿರ್ಮಾಣಗೊಂಡಿದೆ.
::: ನೂತನ ಸೇತುವೆ ಉದ್ಘಾಟನೆ :::
ನೂತನ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.
ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಈಗ ಈಡೇರಿದೆ. ಮಳೆಗಾಲದಲ್ಲಿ ಈ ಭಾಗದ ಜನರು ಸಂಪರ್ಕ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿದ್ದರು. ಇದೀಗ ನೂತನ ಸೇತುವೆ ನಿರ್ಮಾಣದ ಮೂಲಕ ಸಮಸ್ಯೆ ಬಗೆ ಹರಿದಿದೆ. ಆದರೆ ಕೆಲವು ರಸ್ತೆಗಳು ಹದಗೆಟ್ಟಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣದ ಅಗತ್ಯವಿದೆ. ಅಲ್ಲದೆ ಇಲ್ಲಿನ ಮತ್ತೊಂದು ಸೇತುವೆ ಸಂಪೂರ್ಣವಾಗಿ ಶಿಥಿಲಗೊಂಡಿದ್ದು, ಮುಂದಿನ ದಿನಗಳಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
::: ಸನ್ಮಾನ :::
ನೂತನ ಸೇತುವೆ ನಿರ್ಮಾಣಕ್ಕೆ ಕಾಳಜಿ ತೋರಿದ ಶಾಸಕ ಕೆ.ಜಿ.ಬೋಪಯ್ಯ ಅವರನ್ನು ಗ್ರಾಮಸ್ಥರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ಕುಂದಚೇರಿ ಗ್ರಾ.ಪಂ ಅಧ್ಯಕ್ಷರಾದ ಸವಿತಾ ಉದಯಕುಮಾರ್, ಸದಸ್ಯರಾದ ಪಿ.ಬಿ.ದಿನೇಶ್, ಬೇಬಿ ಪೊನ್ನಪ್ಪ, ಅಯ್ಯಂಗೇರಿ ಗ್ರಾ.ಪಂ ಅಧ್ಯಕ್ಷ ರಂಜು, ಭಾಗಮಂಡಲ ಗ್ರಾ.ಪಂ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಪ್ರಮುಖರಾದ ಕಾಡಂಡ ಭೀಮಯ್ಯ, ಡಲೇಶ್ ಕುಮಾರ್, ದಾಯನ ಹರ್ಷವರ್ಧನ್, ಉತ್ತಪ್ಪ, ಶ್ರೀಧರ್ ಮತ್ತಿತರ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
::: ಸಿಹಿ ಹಂಚಿ ಸಂಭ್ರಮ :::
ನೂತನ ಸೇತುವೆ ನಿರ್ಮಾಣಗೊಂಡ ಹಿನ್ನೆಲೆ ಸ್ಥಳೀಯ ಗ್ರಾಮಸ್ಥರು ಸಿಹಿ ಹಂಚಿ ಸಂಭ್ರಮಿಸಿದರು. “ನ್ಯೂಸ್ ಡೆಸ್ಕ್” ಕಚೇರಿಗೆ ಆಗಮಿಸಿದ್ದ ಗ್ರಾಮಸ್ಥರು ಸಿಹಿ ನೀಡಿ ಕೃತಜ್ಞತೆ ಸಲ್ಲಿಸಿದರು.

Follow us Follow us
Share. WhatsApp Facebook Twitter Email Telegram Copy Link

Related Posts

ಅ.27ರಂದು 24ನೇ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ; ಡಾ. ಲಲಿತ ಕೆ.ಪಿ. ಅವರ ‘ಕೊಡಗಿನ ಜಾನಪದ ಕಥೆಗಳು’ ಕೃತಿಗೆ ಪ್ರಶಸ್ತಿ

ಅಕ್ಟೋಬರ್ 25, 2026

ವಿರಾಜಪೇಟೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ; ಸ್ವಾವಲಂಬಿ ಬದುಕಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಖ್ಯ: ಆನಂದ ಸುವರ್ಣ

ಅಕ್ಟೋಬರ್ 25, 2026

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಭರತನಾಟ್ಯ ಮತ್ತು ಸಂಗೀತ ಪ್ರದರ್ಶನ

ಅಕ್ಟೋಬರ್ 25, 2026

ವಿರಾಜಪೇಟೆಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ; ಸ್ವಾವಲಂಬಿ ಬದುಕಿಗೆ ಶಿಕ್ಷಣ ಮತ್ತು ಆರ್ಥಿಕ ಸ್ವಾತಂತ್ರ್ಯ ಮುಖ್ಯ: ಆನಂದ ಸುವರ್ಣ

ಅಕ್ಟೋಬರ್ 25, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ, NEWS DESK ಅ.25: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಜ್ಞಾನವಿಕಾಸ ಕಾರ್ಯಕ್ರಮದಡಿ ವಿರಾಜಪೇಟೆಯ…

48ನೇ ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಭರತನಾಟ್ಯ ಮತ್ತು ಸಂಗೀತ ಪ್ರದರ್ಶನ

ಅಕ್ಟೋಬರ್ 25, 2026

ಕಿವುಡ ಕ್ರೀಡಾಪಟುಗಳಿಗೆ ಪ್ರಾಯೋಜಕತ್ವದ ನೆರವಿಗೆ ಕೊಡಗು ಜಿಲ್ಲಾ ಕಿವುಡರ ಸಂಘದ ಮನವಿ; ರಾಜ್ಯಮಟ್ಟದ ಕ್ರಿಕೆಟ್, ವಾಲಿಬಾಲ್ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಜ್ಜು; ದಾನಿಗಳ ಸಹಕಾರಕ್ಕೆ ಅಧ್ಯಕ್ಷ ಸ್ಯಾಮ್ ಜೋಸೆಫ್ ಮನವಿ

ಅಕ್ಟೋಬರ್ 25, 2026

ನ. 2–3ರಂದು ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿ; 23 ಜಿಲ್ಲೆಗಳ ಪತ್ರಕರ್ತರ ತಂಡಗಳು ಭಾಗಿ; ಮಡಿಕೇರಿಯಲ್ಲಿ ಆಯೋಜನೆ

ಅಕ್ಟೋಬರ್ 25, 2026

ಮಾದಕ ದ್ರವ್ಯಗಳಿಂದ ದೂರವಿದ್ದು ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪಣ ತೊಡಿ: ಎ.ಎಸ್.ಐ. ಸುಮತಿ; ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಎನ್ನೆಸ್ಸೆಸ್ ಶಿಬಿರ

ಅಕ್ಟೋಬರ್ 25, 2026

ಕೊಡಗಿನಲ್ಲಿ ಶೀಘ್ರ ಸಚಿವ ಸಂಪುಟ ಸಭೆ ನಡೆಸಲು ತೇಲಪಂಡ ಶಿವಕುಮಾರ್ ನಾಣಯ್ಯ ಒತ್ತಾಯ

ಅಕ್ಟೋಬರ್ 25, 2026

ಮಂಗಳೂರು ವಲಯದ ಅಂಡರ್-15 ಮಹಿಳಾ ಕ್ರಿಕೆಟ್ ತಂಡಕ್ಕೆ ಪ್ರಗತಿ ಶಾಲೆಯ ಮೂವರು ವಿದ್ಯಾರ್ಥಿನಿಯರು ಆಯ್ಕೆ

ಅಕ್ಟೋಬರ್ 24, 2026

ಕುಶಾಲನಗರ : ಮಳೆಯಿಂದ ಮನೆಗಳಿಗೆ ಹಾನಿ

ಅಕ್ಟೋಬರ್ 24, 2026

ಮಳೆಯಿಂದ ಕೊಡಗಿನ ವಿವಿಧೆಡೆ ಹಾನಿ : ಕುಸಿದು ಬಿದ್ದ ಮನೆಗಳ ಗೋಡೆ, ಮೇಲ್ಛಾವಣಿ, ಕೊಟ್ಟಿಗೆ

ಅಕ್ಟೋಬರ್ 24, 2026

ಮಡಿಕೇರಿಯಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಪಥಸಂಚಲನ

ಅಕ್ಟೋಬರ್ 24, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.