Advertisement
3:56 AM Friday 8-December 2023

ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್ : ವಿರಾಜಪೇಟೆ ಕಾವೇರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ

17/02/2023

ವಿರಾಜಪೇಟೆ ಫೆ.17 : ಮೈಸೂರಿನಲ್ಲಿ ನಡೆದ 29ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್‍ನಲ್ಲಿ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನ, 3 ಬೆಳ್ಳಿ ಹಾಗೂ 3 ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
3ನೇ ತರಗತಿಯ ಸನತ್ ಮುತ್ತಣ್ಣ, 7ನೇ ತರಗತಿ ವಿದ್ಯಾರ್ಥಿಗಳಾದ ಎಸ್.ಎಸ್.ರಶ್ಮಿ ಪೂವಮ್ಮ, ಬಿ.ವೃಷಾಂಕ್ ಪೂವಯ್ಯ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.
5ನೇ ತರಗತಿಯ ಶತಕ ಕಾವೇರಮ್ಮ, 8ನೇ ತರಗತಿಯ ಶಿಪ್ರಾ ಕಾಳಪ್ಪ, 9ನೇ ತರಗತಿಯ ಎನ್.ಡಿ.ಬೋಜಮ್ಮ ಬೆಳ್ಳಿ ಪದಕ ಮತ್ತು 6ನೇ ತರಗತಿಯ ಕೃತಿಕ ಅಕ್ಕಮ್ಮ, 7ನೇ ತರಗತಿಯ ಮೊಹಮ್ಮದ್ ಅಫ್ಸರ್, 9ನೇ ತರಗತಿಯ ಸಿ.ಇ.ಮುತ್ತಣ್ಣ ಕಂಚಿನ ಪದಕವನ್ನು ಪಡೆದು ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದಿದ್ದಾರೆ.
ಇವರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ಶಾಲೆಯ ಕರಾಟೆ ಶಿಕ್ಷಕ ಸೋಮಣ್ಣ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಸ್.ಸುದೇಶ್, ಕಾರ್ಯದರ್ಶಿಗಳಾದ ಪಿ.ಎನ್.ವಿನೋದ್ ಮತ್ತು ಮುಖ್ಯೋಪಾಧ್ಯಾಯನಿಯವರಾದ ಎಂ.ಬಿ.ಪ್ರಮೀಳಾ ಮತ್ತು ಸಹ ಮುಖ್ಯೋಪಾಧ್ಯಾಯನಿಯವರಾದ ಅಮೃತ ಅರ್ಜುನ್ ಹಾಗೂ ಶಿಕ್ಷಕ ವೃಂದ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದರು.