Advertisement
1:07 PM Monday 4-December 2023

ಕೊಡಗು ಪತ್ರಕರ್ತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

01/03/2023

ಮಡಿಕೇರಿ ಮಾ.1 :  ಕೊಡಗು ಪತ್ರಕರ್ತರ ಸಂಘದ ವತಿಯಿಂದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ನೂತನ ಸದಸ್ಯತ್ವಕ್ಕೆ ರೂ.600 ಹಾಗೂ ನವೀಕರಣಕ್ಕೆ ರೂ.500 ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.15 ಕೊನೆಯ ದಿನಾಂಕವಾಗಿದೆ. ಸ್ಥಳೀಯ ,ಪ್ರಾದೇಶಿಕ,ರಾಜ್ಯ,ರಾಷ್ಟ್ರೀಯ ಮಟ್ಟದ ಪತ್ರಿಕೆ ಮತ್ತು ಮಾಧ್ಯಮಗಳು,ವಾರಪತ್ರಿಕೆ ,ಪಾಕ್ಷಿಕಗಳು,ವೆಬ್ ನ್ಯೂಸ್ ಸೇರಿದಂತೆ ಅಧಿಕೃತ ಸುದ್ದಿಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಧಾನ ಸಂಪಾದಕರು,ಸಂಪಾದಕರು,ಉಪ ಸಂಪಾದಕರು,ವರದಿಗಾರರು,ಬಿಡಿ ವರದಿಗಾರರು,ಛಾಯಾಚಿತ್ರಗಾರರು,ಕ್ಯಾಮೆರಾ ಮ್ಯಾನ್ ಗಳು ಅರ್ಜಿ ಸಲ್ಲಿಸಬಹುದಾಗಿದೆ.

ಸಂಪಾದಕರು ಅಥವಾ ಜಿಲ್ಲಾ ವರದಿಗಾರರ ಸಹಿಯೊಂದಿಗೆ ಎರಡು ಭಾವ ಚಿತ್ರ ಕಡ್ಡಾಯವಾಗಿದ್ದು, ಅರ್ಜಿಗಳಿಗಾಗಿ 9945411821,9731469871 ,9901657211 ದೂರವಾಣಿಯನ್ನು ಸಂಪರ್ಕಿಸಿ ಪಡೆದುಕೊಳ್ಳಬಹುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.