ಸೋಮವಾರಪೇಟೆ ಮಾ.7 : ಬೆಂಗಳೂರಿನ ನಾಗರಭಾವಿಯಲ್ಲಿರುವ ಜ್ಞಾನಸೌಧ ಸಭಾಂಗಣದಲ್ಲಿ ನಡೆದ ಬನವಾಸಿ ಕನ್ನಡಿಗ ಕನ್ನಡಮಯ ಟ್ರಸ್ಟಿನ ಆರನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತೆ ಎಂ.ಎ.ರುಬಿನಾ ಅವರಿಗೆ ಬನವಾಸಿ ಕನ್ನಡಿಗ 2023 ರಾಜ್ಯ ಪ್ರಶಸ್ತಿಯನ್ನು ನೀಡಿ ಈಚೆಗೆ ಗೌರವಿಸಲಾಯಿತು.
ಚಲನಚಿತ್ರ ನಿರ್ದೇಶಕ ಟಿ ಎಸ್ ನಾಗಾಭರಣ, ಎಸ್.ಮಹೇಂದರ್, ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್‌ನ ಅಧ್ಯಕ್ಷ ಶಿವಕುಮಾರ್ ನಾಗರನವಿಲೆ, ಕೊಡಗು ತಂಡದ ಅಧ್ಯಕ್ಷ ನೌಷಾದ್ ಜನ್ನತ್ ಮತ್ತು ಬನವಾಸಿ ಕನ್ನಡಿಗ ಟ್ರಸ್ಟ್ ನ ಕಿರಣ್ ಮತ್ತು ಕಿರಣ್ ಮಯಿ ಮತ್ತಿತರು ಗಣ್ಯರು ಇದ್ದರು.








