Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಜನಸ್ಪಂದನ 2.0 : 11 ದಿನದಲ್ಲಿ 4321 ಅರ್ಜಿ ಯಶಸ್ವೀ ವಿಲೇವಾರಿ
ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ಜನಸ್ಪಂದನ 2.0 : 11 ದಿನದಲ್ಲಿ 4321 ಅರ್ಜಿ ಯಶಸ್ವೀ ವಿಲೇವಾರಿ

ಫೆಬ್ರವರಿ 20, 20241 Min ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಬೆಂಗಳೂರು, ಫೆ.19 :  ಇತ್ತೀಚೆಗೆ ವಿಧಾನಸೌಧ ಮುಂಭಾಗ ನಡೆದ ಮಾನ್ಯ ಮುಖ್ಯಮಂತ್ರಿಯವರ ಜನಸ್ಪಂದನ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಸ್ವೀಕರಿಸಿದ ಅರ್ಜಿಗಳ ಸಕಾರಾತ್ಮಕ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್‌ ಅವರು ಸೂಚಿಸಿದರು.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜನಸ್ಫಂದನ ಕಾರ್ಯಕ್ರಮದ ಪರಾಮರ್ಶೆಗಾಗಿ, ಆಯೋಜನೆಯಲ್ಲಿ ಭಾಗಿಯಾದ ಅಧಿಕಾರಿಗಳ ಸಭೆ ನಡೆಸಿ ಈ ಸೂಚನೆ ನೀಡಿದರು.

ಜನಸ್ಪಂದನ ಕಾರ್ಯಕ್ರಮದ ಯಶಸ್ಸಿನ ಕುರಿತು ಮಾನ್ಯ ಮುಖ್ಯಮಂತ್ರಿಯವರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರು ಇದಕ್ಕೆ ಸಾಂಸ್ಥಿಕ ರೂಪ ನೀಡಿ ಇನ್ನಷ್ಟು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಬೇಕೆಂದು ಅಪೇಕ್ಷಿಸಿದ್ದಾರೆ ಎಂದರು.

ವಿಭಾಗ ಮಟ್ಟದಲ್ಲಿ ಜನಸ್ಪಂದನ

ಜನಸ್ಪಂದನ ಕಾರ್ಯಕ್ರಮವನ್ನು ವಿಭಾಗ ಮಟ್ಟದಲ್ಲಿ ನಡೆಸುವ ಕುರಿತೂ ಸಹ ಚಿಂತನೆ ನಡೆದಿದೆ. ಮೊದಲಿಗೆ ಕಲಬುರ್ಗಿಯಲ್ಲಿ ವಿಭಾಗಮಟ್ಟದ ಜನಸ್ಪಂದನ ನಡೆಸಲು ಉದ್ದೇಶಿಸಿದೆ. ವಿಭಾಗ ಮಟ್ಟದಲ್ಲಿ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಖುದ್ದು ಭಾಗವಹಿಸಲು ಸೂಚಿಸಲಾಗುವುದು ಎಂದು ತಿಳಿಸಿದರು.

11 ದಿನದಲ್ಲಿ 4321 ಅರ್ಜಿ ವಿಲೇವಾರಿ

ಮೊನ್ನೆ ಸ್ವೀಕರಿಸಲಾದ 14,685 ಅರ್ಜಿಗಳ ಪೈಕಿ 4321 ಅರ್ಜಿಗಳನ್ನು ಈಗಾಗಲೇ ವಿಲೇವಾರಿ ಮಾಡಲಾಗಿದೆ. ಬಾಕಿ ಉಳಿದ ಅರ್ಜಿಗಳನ್ನೂ ಶೀಘ್ರವೇ ವಿಲೇವಾರಿ ಮಾಡುವಂತೆ ಸೂಚಿಸಿದರು.

ಮುಂದಿನ ಜನಸ್ಪಂದನ ಕಾರ್ಯಕ್ರಮಗಳನ್ನು ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸುವಂತೆ ಹಾಗೂ ಸಾರ್ವಜನಿಕ ಕುಂದುಕೊರತೆ ನಿವಾರಣೆಯ ಈ ಕಾರ್ಯಕ್ರಮಗಳು ದೇಶಕ್ಕೇ ಮಾದರಿಯಾಗುವಂತೆ ನಡೆಯಬೇಕು ಎಂದು ಅವರು ತಿಳಿಸಿದರು.

ಜನಸ್ಪಂದನದಲ್ಲಿ ತಮ್ಮ ಅಹವಾಲುಗಳೊಂದಿಗೆ ಆಗಮಿಸುವ ಜನರ ಕುರಿತು ಕಾಳಜಿ ವಹಿಸಬೇಕು; ಅವರ ನೋವಿಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆಂಬ ಸಂತೃಪ್ತಿ ಅವರಲ್ಲಿ ಮೂಡಬೇಕು. ನಿಯಮಾನುಸಾರ ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಅಹವಾಲುಗಳಿಗೆ ಸ್ಪಷ್ಟ ಹಿಂಬರಹ ನೀಡಬೇಕು. ಮನವಿದಾರರು ಪದೇ ಪದೇ ಜನಸ್ಪಂದನ ಕಾರ್ಯಕ್ರಮಕ್ಕೆ ಅದೇ ಅಹವಾಲಿನೊಂದಿಗೆ ಆಗಮಿಸುವಂತಾಗಬಾರದು ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ ಅವರು ಜನಸ್ಪಂದನ ಕಾರ್ಯಕ್ರಮವನ್ನು ಮುಂದಿನ ಬಾರಿ ಇನ್ನಷ್ಟು ವ್ಯವಸ್ಥಿತವಾಗಿ ಆಯೋಜಿಸುವ ನಿಟ್ಟಿನಲ್ಲಿ ಇಂದಿನ ಸಭೆಯ ಚರ್ಚೆಯ ಅಂಶಗಳನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಇ-ಆಡಳಿತ ಇಲಾಖೆಯ ಕಾರ್ಯದರ್ಶಿ ಉಜ್ವಲ್‌ ಕುಮಾರ್‌ ಘೋಷ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
Follow us Follow us
Share. WhatsApp Facebook Twitter Email Telegram Copy Link

Related Posts

31 ವರ್ಷಗಳಿಂದ ಮನೆಮನೆಗೆ ಕಾವೇರಿ ತೀರ್ಥ ವಿತರಣೆ: ಕೊಡಗು ಹಕ್ಕು ಸಂರಕ್ಷಣಾ ಸಮಿತಿಯ ಧಾರ್ಮಿಕ ಸೇವೆ

ಅಕ್ಟೋಬರ್ 20, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ಮೈಸೂರು ಕೊಡಗು ಗೌಡ ಸಮಾಜದಿಂದ ಭಕ್ತಿಭಾವದ ಕಾವೇರಿ ತೀರ್ಥ ವಿತರಣೆ

ಅಕ್ಟೋಬರ್ 20, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ನಾಪೋಕ್ಲು, NEWS DESK ಅ.20: ಮೈಸೂರು ಕೊಡಗು ಗೌಡ ಸಮಾಜದ ವತಿಯಿಂದ ಸಮುದಾಯದ ಬಾಂಧವರಿಗೆ ಕಾವೇರಿ ತೀರ್ಥ ವಿತರಣೆ ಕಾರ್ಯಕ್ರಮವು…

ವಿರಾಜಪೇಟೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶಾರದಾ, ಲಕ್ಷ್ಮಿ ಪೂಜೆ

ಅಕ್ಟೋಬರ್ 19, 2026

ವಿರಾಜಪೇಟೆ ಮಹಿಳಾ ಸಹಕಾರ ಸಂಘದಿಂದ ಶಾರದಾ ಪೂಜೆ

ಅಕ್ಟೋಬರ್ 19, 2026

ಗೋಣಿಕೊಪ್ಪ ದಸರಾದಲ್ಲಿ ಗಮನ ಸೆಳೆದ ಗೀತೆಗಳ ಗಾನಸುಧೆ, ಮಕ್ಕಳ ನೃತ್ಯ ವೈಭವ

ಅಕ್ಟೋಬರ್ 19, 2026

ಟಿ. ಶೆಟ್ಟಿಗೇರಿಯಲ್ಲಿ ₹10 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಆಟೋ ತಂಗುದಾಣ ಲೋಕಾರ್ಪಣೆ

ಅಕ್ಟೋಬರ್ 19, 2026

ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರಕ್ಕೆ ಮಾಜಿ ಸಚಿವ ಅಪ್ಪಚ್ಚು ರಂಜನ್ ಚಾಲನೆ

ಅಕ್ಟೋಬರ್ 19, 2026

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಗಳನ್ನು ಹೊರ ತರಲು ಪ್ರತಿಭಾ ದಿನಾಚರಣೆಯು ವೇದಿಕೆ

ಅಕ್ಟೋಬರ್ 19, 2026

ಮಡಿಕೇರಿಯಲ್ಲಿ ಸಂಭ್ರಮದ 9ನೇ ವರ್ಷದ ಮಹಿಳಾ ದಸರಾ; ಮಹಿಳೆಯರ ಸಾಧನೆಗೆ ಶಿಕ್ಷಣ ಅತ್ಯವಶ್ಯ: ವಿಜಯಲಕ್ಷ್ಮಿ ಸಿಂಗ್

ಅಕ್ಟೋಬರ್ 19, 2026

ಕಾವೇರಿ ತುಲಾ ಸಂಕ್ರಮಣದ ಹಿನ್ನೆಲೆ : ದೇವಟ್ ಪರಂಬ್ ನಲ್ಲಿ ಬೊತ್ತ್ ಬಳ್ಳಿ ಸುತ್ತಿದ ಕೋಲಿನ ಮೇಲೆ ದೋಸೆ ಮತ್ತು ಪುಟ್ಟ್ ಇಟ್ಟು ಸಿಎನ್‌ಸಿ ಸ್ಮರಣೆ

ಅಕ್ಟೋಬರ್ 19, 2026

ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷ ಪೀಟು ಕಾರ್ಯಪ್ಪ ಅವರನ್ನು ಅಭಿನಂದಿಸಿದ ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್

ಅಕ್ಟೋಬರ್ 19, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.