ವಿರಾಜಪೇಟೆ ಫೆ.23 NEWS DESK : ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ಹಾಗೂ ಏಷ್ಯಾನ್ ಸ್ಪೋರ್ಟ್ಸ್ ಡಾನ್ಸ್ ಕೌನ್ಸಿಲ್ ವತಿಯಿಂದ ಜಮ್ಮು ಕಾಶ್ಮೀರದಲ್ಲಿ ನಡೆದ ರಾಷ್ಟ್ರ ಮಟ್ಟದ ಸ್ಪೋರ್ಟ್ಸ್ ಡಾನ್ಸ್ ಚಾಂಪಿಯನ್‍ಶಿಪ್‍ನಲ್ಲಿ ನಾಟ್ಯಾಂಜಲಿ ನೃತ್ಯ ಹಾಗೂ ಸಂಗೀತ ಸಂಸ್ಥೆಯ 19 ವಿದ್ಯಾರ್ಥಿಗಳು ಸೋಲೋ, ಡಬಲ್ಸ್ ಹಾಗೂ ಗ್ರೂಪ್ ಡಾನ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಒಟ್ಟು 31 ಚಿನ್ನ, 5 ಬೆಳ್ಳಿ, 8 ಕಂಚು ಪದಕಗಳನ್ನು ಪಡೆದು ಚಾಂಪಿಯನ್‍ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೇ ತಿಂಗಳಿನಲ್ಲಿ ಭೂತಾನ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಪ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಸಂಸ್ಥೆಯ ಗುರುಗಳಾದ ಹೇಮಾವತಿ ಕಾಂತ್ ರಾಜ್ ಹಾಗೂ ಕಾವ್ಯಶ್ರೀ ಕಾಂತ್ ರಾಜ್ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ.







