ಕಡಂಗ ಫೆ.28 NEWS DESK : ಕಡಂಗ ವಿಜಯ ಪ್ರಾಥಮಿಕ ಶಾಲೆಯಲ್ಲಿ ಸರ್ ಸಿ.ವಿ.ರಾಮನ್ ಅವರ ಸ್ಮರಣಾರ್ಥವಾಗಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಶಾಲೆಯ 6ನೇ ಹಾಗೂ 7ನೇ ತರಗತಿ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿ ಪ್ರದರ್ಶನ ನಡೆಯಿತು. ಶಾಲೆಯ ಅಧ್ಯಕ್ಷರಾದ ಬಲ್ಯಂಡ ಪಿ.ಬಿದ್ದಪ್ಪ, ನಿರ್ದೇಶಕರಾದ ಬಲ್ಲಚಂಡ ಮಾದಯ್ಯ ಹಾಗೂ ಸದಸ್ಯರು ವೀಕ್ಷಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿದರು.
ಈ ಸಂದರ್ಭ ಪ್ರೌಢಶಾಲಾ ಮುಖ್ಯೋಪಾಧ್ಯಯ ಸೋಮಶೇಖರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಯರಾದ ಬೋಜಮ್ಮ, ವಿಜ್ಞಾನ ಶಿಕ್ಷಕಿ ಕೆ.ಸಿ.ದಿವ್ಯ, ಶಿಕ್ಷಕ ವೃಂದದವರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.







