ಮಡಿಕೇರಿ ಮಾ.4 NEWS DESK : ಮಾಯಮುಡಿ ಗ್ರಾ.ಪಂ ವ್ಯಾಪ್ತಿಯ ಮಾಯಮುಡಿ ಹಾಗೂ ಧನುಗಾಲ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮ ನಡೆಯಿತು.
ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಎ.ಎಸ್.ಟಾಟು ಮೊಣ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಐದು ವರ್ಷದೊಳಗಿನ ಮಕ್ಕಳಿಗೆ ತಾಯಂದಿರು ಕಡ್ಡಾಯವಾಗಿ ಪಲ್ಸ್ ಪೋಲಿಯೋ ಹಾನಿ ಹಾಕಿಸುವ ಮೂಲಕ ದೇಶದಲ್ಲಿ ಪೋಲಿಯೋ ನಿಮೂರ್ಲನೆಗೆ ಪಣತೊಡಬೇಕು ಎಂದರು.
ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಸುಮಿತ್ರ ಬಸವಣ್ಣ, ಅಭಿವೃದ್ಧಿ ಅಧಿಕಾರಿ ರವಿ ಮೆಟಲ್ ಕೋಡ್, ಪ್ರಾಥಮಿಕ ಆರೋಗ್ಯ ಸಂರಕ್ಷಣಾಧಿಕಾರಿಗಳಾದ ಚೀರಂಜೀವಿ, ಇಂದಿರಾ, ಕಾವ್ಯ ಸಂತು, ಅಂಗನವಾಡಿ ಕಾರ್ಯಕರ್ತರಾದ ಉಮಾದೇವಿ, ರಾಧ, ಪ್ರೇಮ, ಆಶಾ ಕಾರ್ಯಕರ್ತೆಯರಾದ ಸುನೀತಾ, ಕವಿತಾ, ಗಾಯತ್ರಿ ಹಾಗೂ ಮೀನಾಕ್ಷಿ ಹಾಜರಿದ್ದರು.







