ಮಡಿಕೇರಿ ಮಾ.6 NEWS DESK : ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವದಲ್ಲಿ ಸೋಮವಾರಪೇಟೆಯ ಹೆಚ್.ಡಿ.ರೋಜಾ ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಭೂವಿಜ್ಞಾನ ವಿಭಾಗದಲ್ಲಿ ಪಿ.ಹೆಚ್.ಡಿ ಪದವಿ ನೀಡಿ ಗೌರವಿಸಿದೆ.
ಡಾ. ಡಿ.ನಾಗರಾಜು ಅವರ ಮಾರ್ಗದರ್ಶನದಲ್ಲಿ “ಹೈಡ್ರೋಜಿಯಾಲಜಿಕಲ್ ಸ್ಟಡೀಸ್ ಆನ್ ಸೋಮವಾರಪೇಟೆ ವಾಟರ್ ಶೆಡ್ ಕೊಡಗು ಡಿಸ್ಟ್ರೀಕ್ಟ್ ಯು ಸಿಂಗ್ ರಿಮೋಟ್ ಸೆನ್ಸಿಂಗ್ ಆಂಡ್ ಜಿ.ಐ.ಎಸ್” ವಿಷಯದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದರು.
ರೋಜಾ ಸೋಮವಾರಪೇಟೆ ತಾಲ್ಲೂಕಿನ ಹಿರಿಕರ ಗ್ರಾಮದ ನಿವೃತ್ತ ಶಿಕ್ಷಕರಾದ ಹೆಚ್.ಬಿ.ಧರ್ಮಪ್ಪ ಹಾಗೂ ಹೆಚ್.ಡಿ.ಲತಾ ದಂಪತಿಗಳ ಪುತ್ರಿ. ಇವರು ಪ್ರಸ್ತುತ ಕೊಡಗು ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಭೂವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.






