
ಸುಂಟಿಕೊಪ್ಪ ಮಾ.11 NEWS DESK : ಸುಂಟಿಕೊಪ್ಪದಲ್ಲಿ ಭಾರತ್ ರೈಸ್ ವಿತರಣಾ ಕಾರ್ಯಕ್ರಮ ನಡೆಯಿತು. ವಾಹನ ಚಾಲಕ ಮತ್ತು ಮಾಲೀಕರ ಸಂಘದ ಮುಂಭಾಗದಲ್ಲಿ ವಿತರಿಸಿ, ಮಾತನಾಡಿದ ಪಿ.ಆರ್.ಸುನಿಲ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಆಗಿರುವ ಭಾರತ್ರೈಸ್ ಅಕ್ಕಿ ವಿತರಣೆ ಎಲ್ಲರಿಗೂ ಲಭ್ಯವಾಗಲಿದೆ. ಕೆ.ಜಿ.ಯೊಂದಕ್ಕೆ 29 ರೂಪಾಯಿಯಂತೆ 10 ಕೆ.ಜಿ.ಚೀಲವನ್ನು ರೂ 290 ಲಭ್ಯವಾಗುತ್ತಿದೆ ಈ ಗುಣ ಮಟ್ಟದ ಅಕ್ಕಿಗೆ ಅಂಗಡಿಗಳಲ್ಲಿ ರೂ 70 ರಿಂದ 80 ರವರೆಗೆ ಕೆಜಿಯೊಂದಕ್ಕೆ ಮಾರಾಟಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬಡವ ಬಲಿದ ಎಂದು ನೋಡದೆ ಎಲ್ಲಾರಿಗೂ ಲಭ್ಯವಾಗುವಂತೆ ಮಾರಾಟಗೊಳಿಸಲಾಗುವುದು ಎಂದು ಹೇಳಿದರು.
ಸೋಮವಾರಪೇಟೆ ಮಂಡಲ ಬಿಜೆಪಿಯ ಮುಖಂಡ ಗೌತಮ್ ರೈ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಗ್ರಾ.ಪಂ ಅಧ್ಯಕ್ಷ ಪಿ.ಆರ್.ಸುನಿಲ್ಕುಮಾರ್, ಸದಸ್ಯರಾದ ಬಿ.ಎಂ.ಸುರೇಶ್, ಶಾಂತಿ, ಶಕ್ತಿಕೇಂದ್ರ ಪ್ರಮುಖ್ ವಾಸು, ಬಿ.ಕೆ.ಪ್ರಶಾಂತ್, ಸುಂಟಿಕೊಪ್ಪ ಬಿಜೆಪಿ ಯುವಮೋರ್ಚಾದ ಅಧ್ಯಕ್ಷ ವಿಘ್ನೇಶ್, ಬಿಜೆಪಿ ಮಾಜಿ ಅಧ್ಯಕ್ಷ ಬಿ.ಕೆ.ಮೋಹನ್ ಮತ್ತಿತರರು ಇದ್ದರು.





































