ನಾಪೋಕ್ಲು ಏ.4 : ಚೆರಿಯ ಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಪಂದ್ಯಾವಳಿಯಲ್ಲಿ ಪಾಲಚಂಡ ತಂಡವು ಭರ್ಜರಿ ಜಯಗಳಿಸಿತು.
ಪಾಲಚಂಡ ತಂಡ ಬಿಜ್ಜಂಡ ತಂಡದ ವಿರುದ್ಧ 6-0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.
ನಂಬುಬುಡಮಂಡ ಮತ್ತು ಪೊನ್ನಾಲತಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಂಬುಡ ಮಂಡ ತಂಡ 3-1 ಅಂತರದಿಂದ ಗೆಲುವು ಸಾಧಿಸಿತು. ಮತ್ತೊಂದು ಪಂದ್ಯದಲ್ಲಿ ನಡಿಕೇರಿ ಯಂಡ ವಿರುದ್ಧ ವಾಟೇರಿರ 3 -0 ಅಂತರದ ಗೆಲುವು ಸಾಧಿಸಿತು .ಕೇಕಡ ಮತ್ತು ಕೂಪದಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಟೈ ಬ್ರೇಕರ್ ನಲ್ಲಿ ಕೂಪದಿರ 3-1 ಅಂತರದ ಗೆಲುವು ಸಾಧಿಸಿತು.,ಮೊಣ್ಣಂಡ ಆಪಟ್ಟಿರ ತಂಡದ ವಿರುದ್ಧ 3-0 ಜಯ ಸಾಧಿಸಿತು.
ಅಮ್ಮನಕುಟ್ಟಂಡ ವಿರುದ್ಧ ಬೊಟ್ಟೋಳಂಡ ತಂಡ ,ಕಿರಿಯಮಾಡ ತಂಡದ ವಿರುದ್ಧ ಬೈರಟಿರ ತಂಡ ,ನೆಲ್ಲಿರ ವಿರುದ್ಧ ಕುಪ್ಪಣಮಾಡ, ಜಂಬಂಡ ವಿರುದ್ಧ ಚೊಟ್ಟೆಮಾಡ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದವು
ಪಾಲೆಯಡ ತಂಡವು ತಂಬಂಡ ವಿರುದ್ಧ3-0 ಅಂತರದ ಗೆಲುವು ಸಾಧಿಸಿತು.
ಕಲ್ಲೆಂಗಡ ಪಳಂಗೇಟಿರ ತಂಡದ ವಿರುದ್ಧ ಗೆಲುವು ಸಾಧಿಸಿತು. ಕಲ್ಲೇಂಗ 3 ಗೋಲು ಗಳಿಸಿದರೆ ಪಳಂಗೇಟಿರ ಯಾವುದೇ ಗೋಲು ಗಳಿಸಲಿಲ್ಲ.ಚೊಟ್ಟೇರ ಕಾಯಪಂಡ ವಿರುದ್ಧ 2-1 ಅಂತರದ ಗೆಲುವು ಸಾಧಿಸಿತು. ಕೊಕ್ಕಲ ಮಾಡ ತಂಡವು ಬಾಚಮಂಡ ವಿರುದ್ಧ ಸೋಲನ್ನು ಅನುಭವಿಸಿತು .ಬಾಚ ಮಂಡ ತಂಡ 3 ಗೋಲು ಗಳಿಸಿ ಮುನ್ನಡೆ ಸಾಧಿಸಿತು. ಬೋಳ್ತಂಡ ತಂಡ ದ ವಿರುದ್ಧ ಅದೇಂಗಡ ಗೆಲುವು ಸಾಧಿಸಿದರೆ ಬಲ್ಲಿಯಂಡ ವಿರುದ್ಧ ಚೆರುವಾಳಂಡ 2-1 ಅಂತರದ ಗೆಲುವು ಸಾಧಿಸಿತು.
ಬೊಜ್ಜಂಗಡ ತಂಡವು 5 ಗೋಲು ಗಳಿಸಿ ಮುದ್ದಿಯಂಡ ವಿರುದ್ಧ ಗೆಲುವು ಸಾಧಿಸಿತು. ಆತಿಥೇಯ ಕುಂಡ್ಯೋಳಂಡ 3-2 ರಮುನ್ನಡೆಯೊಂದಿಗೆ ಪುಚ್ಚಿಮಾಡ ತಂಡದ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.
ಇಂದಿನ ಪಂದ್ಯಗಳು
ಮೈದಾನ-1
9 ಗಂಟೆಗೆ ಪೊ0ಜಂಡ- ಪೊನ್ನಕಚಿರ
10 ಗಂಟೆಗೆ ಬಡ್ಡಿರ-ಚರಿಮಂಡ
11 ಗಂಟೆಗೆ ಕಾಳಚಂಡ-ಬೊಳ್ಳಚೆಟ್ಟಿರ
1 ಗಂಟೆಗೆ ಪೆಬ್ಬಟ್ಟಿರ-ಮಲ್ಲಜ್ಜಿರ
2 ಗಂಟೆಗೆ ಪಟ್ಟಚೆರುವಾಳಂಡ-ಮಳವಂಡ
3 ಗಂಟೆಗೆ ಬಾಚಿರ-ಮಲ್ಲಂಡ
ಮೈದಾನ-2
9 ಗಂಟೆಗೆ ಕಳ್ಳಿರ- ಮುಕ್ಕಾಟಿರ(ಕುಂಜಿಲಗೇರಿ)
10 ಗಂಟೆಗೆ ಮಚ್ಚಾರಂಡ-?ಮುಡಿಯಂಡ
11 ಗಂಟೆಗೆ ಓಡಿಯಂಡ- ದೆಯಂಡ
1 ಗಂಟೆಗೆ ಆಪಾಡಂಡ- ದಾಸಂಡ
2 ಗಂಟೆಗೆ ಪಳಂಗಿಯಂಡ-ತಡಿಯಂಗಡ
3 ಗಂಟೆಗೆ ಮುಕ್ಕಾಟಿರ (ಕುಂಬಳದಾಳು) -ತಿರೋಟಿರ
ಮೈದಾನ 3
9 ಗಂಟೆಗೆ ಅಳ್ತಂಡ-ಬೊಳಿಯಾಡಿರ
10 ಗಂಟೆಗೆ ಕೋಟೆರ (ಮುಗುಟಗೇರಿ)-ನಂದೀರ
11 ಕುಂಡಚ್ಚಿರ-ಮಾಪಂಗಡ
1 ಗಂಟೆಗೆ ನಿಡುಮಂಡ -ಸಿದ್ದಂಡ
2 ಗಂಟೆಗೆ ಅಜ್ಜೇಟಿರ -ಬಟ್ಟೀರ
3ಗಂಟೆ ಗೆ ಕೊಟ್ಟಂಗಡ-ಮಂಗೇರ
ವರದಿ : ದುಗ್ಗಳ ಸದಾನಂದ.







