


ಮಡಿಕೇರಿ NEWS DESK ಏ.24 : ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಜಂಕ್ಷನ್ ರಾಯಲ್ ಕೊಂಡಂಗೇರಿ ಆಶ್ರಯದಲ್ಲಿ ಏ.27 ರಿಂದ ಮೇ 1ರ ವರೆಗೆ 13ನೇ ವರ್ಷದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಕೊಂಡಂಗೇರಿ ಶಾಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ 33,333, ದ್ವಿತೀಯ ಬಹುಮಾನ 22,222 ,ತೃತೀಯ ಮತ್ತು 4ನೇ ಬಹುಮಾನ ಆಕರ್ಷಕ ಟ್ರೋಫಿ ನೀಡಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ. ಅದಲ್ಲದೇ ವಿವಿಧ ಕ್ರೀಡಾ ಮತ್ತು ವಿವಿಧ ಸಾಮಾಜಿಕ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ಸನ್ಮಾನಿಸಲಾಗುವುದೆಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9535782783,966338006, 87626743996 ಸಂಪರ್ಕಿಸಬಹುದು.










