
ಮಡಿಕೇರಿ ಏ.30 NEWS DESK : ಮಡಿಕೇರಿ 66/11ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಹೊರಹೋಗುವ ಭಾಗಮಂಡಲ, ಸಂಪಾಜೆ ಮತ್ತು ಮೇಕೇರಿ ಫೀಡರ್‌ನ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣೆ (ಮಳೆಗಾಲದ ಪೂರ್ವ ನಿರ್ವಹಣೆ) ಕಾಮಗಾರಿ ನಡೆಸಬೇಕಾಗಿರುವುದರಿಂದ ದಿನಾಂಕ 02.05.2024 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಮೇಕೇರಿ, ತಾಳತ್ತಮನೆ, ಸಂಪಾಜೆ, ಚೆಂಬು, ಬೆಟ್ಟಗೇರಿ, ಚೇರಂಬಾಣೆ, ಭಾಗಮಂಡಲ, ಕಡಗದಾಳು, ಹಾಕತ್ತೂರು ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.








